Wednesday, August 17, 2022

Latest Posts

ಅಂಕೋಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

ಹೊಸದಿಗಂತ ವರದಿ, ಅಂಕೋಲಾ:

ಕನ್ನಡದ ಬಾರ್ಡೋಲಿ ಅಂಕೋಲೆಯಲ್ಲಿ ಕನ್ನಡ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಇಲ್ಲಿಯ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ‘ಹಚ್ಚೇವು ಕನ್ನಡದ ದೀಪ’ ಮುಂತಾದ ಕನ್ನಡಪರ ಹಾಡುಗಳನ್ನು ಹಾಡಿ ಕನ್ನಡದ ಕಂಪನ್ನು ಹೆಚ್ಚಿಸಿದರು.
ಉಪನ್ಯಾಸಕ ಡಾ. ಸಿದ್ದಲಿಂಗಸ್ವಾಮಿ ವಸ್ತ್ರದ ಕನ್ನಡದ ಅಸ್ಮಿತೆಯ ಕುರಿತಾಗಿ ಉಪನ್ಯಾಸ ನೀಡಿದರು.
ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ಉಪಾಧ್ಯಕ್ಷೆ ರೇಖಾ ಗಾಂವಕರ್, ತಹಶೀಲ್ದಾರ್ ಉದಯ ಕುಂಬಾರ, ಸಿಪಿಐ ಸಂತೋಷ , ಶಿಕ್ಷಣಾಧಿಕಾರಿ ಹರ್ಷಿತಾ ನಾಯಕ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪಿ. ವೈ. ಸಾವಂತ, ಪುರಸಭೆ ಮುಖ್ಯಾಧಿಕಾರಿ ಶೃತಿ ಗಾಯಕವಾಡ್ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!