Tuesday, August 9, 2022

Latest Posts

ಬಾಗಲಕೋಟೆ ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಹೊಸದಿಗಂತ ವರದಿ, ಬಾಗಲಕೋಟೆ:

ಜಿಲ್ಲಾ ಆಡಳಿತದಿಂದ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಸಚಿವರಾದ ಉಮೇಶ ಕತ್ತಿಯವರು ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ರಾಷ್ಟ್ರ ಧ್ವಜ ನೆರವೇರಿಸಿದರು.ಬಳಿಕ ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ಅರಣ್ಯ ,‌ಎನ್ ಸಿಸಿ, ಶಾಲಾ ಮಕ್ಕಳಿಂದ ಗೌರವ ವಂದನೆ ಸ್ವೀಕರಿಸಿದರು.
ಈ ಬಾರಿ ಕನ್ನಡ ರಾಜ್ಯೋತ್ಸವದಲ್ಲಿ ಪೊಲೀಸ್ ವಾಧ್ಯ ಕೂಡ ಕನ್ನಡದಲ್ಲಿ ನಡೆಸಲಾಯಿತು. ಇದಲ್ಲದೇ ಪಥಸಂಚಲನದ ಕ್ಯಾಪ್ಟನ್ ಗಳ ಸಹ ಕನ್ನಡ ಬಳಕೆ ಮಾಡಿ ಪಥಸಂಚಲನ ನಡೆಸಿದ್ದು ವಿಶೇಷವಾಗುತ್ತು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಿದ ಸಚಿವ ಕತ್ತಿಯವರು, ಭವ್ಯ ಇತಿಹಾಸ ಹೊಂದಿರುವ ನಮ್ಮ ಈ ಕನ್ನಡ ನಾಡು ದೇಶಕ್ಕೆ ಆದರ್ಶಪ್ರಾಯವಾದ ಸರ್ವಧರ್ಮ
ಸಮನ್ವಯತೆ,ಶಾಂತಿ, ಪರಧರ್ಮ, ಸಹಿಷ್ಣುತೆ ಆಚರಿಸುತ್ತಿರುವ ನಾಡು ನಮ್ಮದು ಎಂದರು.
ಸುಮಾರು 2500 ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಯ ಕವಿ ಕೋಗಿಲೆಗಳ ಸಾಹಿತ್ಯ ವಿಜೃಂಭಿಸುತ್ತಿದೆ. ಅಂತಕರಣವನ್ನು ಕಲಕುವ ರೀತಿಯಲ್ಲಿ ಬಂಡಾಯ -ದಲಿತ ಸಾಹಿತ್ಯವು ಕನ್ನಡ ಭಾಷೆಗೆ ಶ್ರೇಚ್ಠತೆಯನ್ನು ನೀಡಿದೆ ಎಂದು ಹೇಳಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ‌ ಮಹನೀಯರನ್ನು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ವಿ.ಪ.ಸದಸ್ಯ ಹಣಮಂತ ನಿರಾಣಿ, ಡಿಸಿ ಕ್ಯಾ.ರಾಜೇಂದ್ರ,‌ಎಸ್ಪಿ ಲೋಕೇಶ ಜಗಲಾಸಾರ, ಸಿಇಓ ಟಿ.ಭೂಬಾಲನ್ ,ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ವಿ.ಪ.ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ,ನಗರಸಭೆ ಸದಸ್ಯ ಲೆಂಕೆಣ್ಣವರ,ಕುಪ್ಪಸ್ತ, ಶಿಂಧೆ,ರಾವ್ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss