Friday, August 12, 2022

Latest Posts

ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ: ಸಾಹಿತಿ ಬಿ.ಎನ್. ವಾಸರೆಗೆ ಗೆಲುವು

ಹೊಸದಿಗಂತ ವರದಿ, ಅಂಕೋಲಾ:

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪತ್ರಕರ್ತ, ಸಾಹಿತಿ ಬಿ.ಎನ್. ವಾಸರೆ ಅವರು ಭರ್ಜರಿ ಮತಗಳಿಂದ ಜಯಗಳಿಸಿದ್ದಾರೆ .
ಜಿಲ್ಲೆಯಲ್ಲಿ ಚಲಾವಣೆಗೊಂಡ 2789 ಮತಗಳಲ್ಲಿ ಬಿ.ಎನ್. ವಾಸರೆ ಅವರು 2168 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿಗಳಿಗಿಂತ ಅತ್ಯಂತ ಹೆಚ್ಚಿನ ಅಂತರಗಳಿಂದ ಜಯಸಾಧಿಸಿದ್ದು ಇತರ ಸ್ಪರ್ಧಿಗಳಾದ ವೇಣುಗೋಪಾಲ್ ಮುದ್ಗಣಿ 346, ಕೃಷ್ಣಮೂರ್ತಿ ಹೆಬ್ಬಾರ್ 156, ಶಾರದಾ ಭಟ್ಟ 59, ಆರ್.ವಿ.ಗುಡೆಪ್ಪನವರ್ 53 ಮತಗಳನ್ನು ಪಡೆದುಕೊಂಡಿದ್ದು 7 ಮತಗಳು ತಿರಸ್ಕೃತಗೊಂಡಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 13 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು ಯಲ್ಲಾಪುರ ಹೊರತುಪಡಿಸಿ ಬೇರೆ ಎಲ್ಲಾ ಮತಗಟ್ಟೆಗಳಲ್ಲಿ ವಾಸರೆ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಬೊಮ್ಮಯ್ಯ ವಾಸರೆ ಅವರು ಆಯ್ಕೆ ಆಗಿರುವುದಕ್ಕೆ ಅಂಕೋಲಾದಲ್ಲಿ ಸಾಹಿತಿಗಳು ಸಿಹಿ ಹಂಚಿ ಸಂಭ್ರಮಿಸಿದರು.
ಹಿರಿಯ ಸಾಹಿತಿ ವಿಷ್ಣು ನಾಯ್ಕ, ಗೋಪಾಲಕೃಷ್ಣ ನಾಯಕ, ಜಗದೀಶ ನಾಯಕ, ಮಹಾಂತೇಶ ರೇವಡಿ ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss