Sunday, August 14, 2022

Latest Posts

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಶಕ್ತಿಯಾಗಬೇಕು: ಮಾಯಣ್ಣ

ಹೊಸದಿಗಂತ ವರದಿ, ಮಂಗಳೂರು:

ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ಬಗೆಯಲ್ಲಿ ಕಾಯಕಲ್ಪ ನೀಡುವುದು ಮತ್ತು ಪರಿಷತ್ತನ್ನು ಸಮಸ್ತ ಕನ್ನಡಿಗರ ಶಕ್ತಿ ಕೇಂದ್ರವಾಗಿ ರೂಪಿಸುವ ನೆಲೆಯಲ್ಲಿ ಕಾರ್ಯೋನ್ಮುಖನಾಗಿದ್ದೇನೆ. ಸಮಸ್ತ ಕನ್ನಡಿಗರು ತನ್ನನ್ನು ಬೆಂಬಲಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಾಯಣ್ಣ ಹೇಳಿದ್ದಾರೆ.

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕಸಾಪ ಕನ್ನಡಿಗರ ಶಕ್ತಿ ಕೇಂದ್ರವಾಗಬೇಕೆಂಬುದೇ ನನ್ನ ಹೆಬ್ಬಯಕೆ. ಆರ್ಥಿಕ ಸಬಲತೆ, ಕ್ರಿಯಾತ್ಮಕ ಯೋಜನೆ, ಸ್ಪಷ್ಟ ಆಲೋಚನೆ, ದೂರಗಾಮಿ ಚಿಂತನೆಗಳು ಕಸಾಪವನ್ನು ಸರ್ವಶಕ್ತಗೊಳಿಸುವ ಸನ್ಮಾರ್ಗ. ಈ ದೆಸೆಯಲ್ಲಿ ನಾಡಿನ ಚಿಂತಕರು, ತಜ್ಞರು, ಪ್ರಾಜ್ಞರೊಂದಿಗೆ ಸಮಾಲೋಚನೆ ನಡೆಸಿ ಹಲವು ಕ್ರಿಯಾಯೋಜನೆಗಳನ್ನು ರೂಪಿಸಿಕೊಂಡಿದ್ದೇನೆ ಎಂದವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಬಗ್ಗೆ ಪ್ರತಿಯೊಬ್ಬರೂ ಮಾತನಾಡಿಕೊಳ್ಳುವಂತಹ ಉತ್ತಮ ಕಾರ್ಯಗಳಾಗಬೇಕು. ಕನ್ನಡ ಉಳಿದರಷ್ಟೆ ಕನ್ನಡಿಗರು ಉಳಿಯಲು ಸಾಧ್ಯ. ಸಾಹಿತ್ಯ ಪರಿಷತ್ತಿಗಾಗಿ ಸರಕಾರ ೫ ಅಥವಾ ೩ ಸಾವಿರ ಕೋಟಿ ನೀಡಿದರೆ ಕನ್ನಡ ಪರವಾದ ಕೆಲಸವನ್ನು ನಿರಂತರವಾಗಿ ಪ್ರತಿ ತಾಲೂಕು, ಹೋಬಳಿ ಮಟ್ಟದಲ್ಲಿ ಸರಕಾರದ ಅನುದಾನದ ಬಡ್ಡಿಯಲ್ಲಿಯೇ ಮಾಡಬಹುದು. ಕಸಾಪ ಮೂಲಕ ಕನ್ನಡದ ಕೆಲಸವನ್ನು ಮಾಡುವ ಹಲವು ಕನಸುಗಳನ್ನು ಹೊತ್ತು ಸ್ಪರ್ಧೆಗಿಳಿದಿದ್ದೇನೆ. ಕನ್ನಡಿಗರು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಮಾಯಣ್ಣ ಹೇಳಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss