ಹೊಸದಿಗಂತ ವರದಿ,ಹಾವೇರಿ:
ಹಾವೇರಿಯಲ್ಲಿ ಜರಗಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿವಿಧ ಸಮಿತಿಗಳು ಸಲ್ಲಿಸಿದ ಮೊತ್ತವನ್ನು ಪರಿಶೀಲಿಸಿ ಅಂತಿಮವಾಗಿ ೧೯,೯೩,೫೦,೦೦೦ರೂ ಮೊತ್ತಕ್ಕೆ ಅನುಮೋದನೆ ನೀಡಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಣಕಾಸು ಸಮಿತಿಯ ಉಪಾಧ್ಯಕ್ಷ ಸುರೇಶಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಹಣಕಾಸು ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಇದರಲ್ಲಿ ವಸತಿ, ಸಾರಿಗೆ, ಊಟೋಪಚಾರ, ಪ್ರಚಾರ, ವೇದಿಕೆ ಸೇರಿದಂತೆ ವಿವಿಧ ಸಮಿತಿಗಳಿಂದ ೩೨,೮೬,೬೦,೫೬೨ರೂ ಮೊತ್ತದ ಪ್ರಸ್ತಾವನೆಯನ್ನು ನೀಡಲಾಗಿತ್ತು. ಹಣಕಾಸು ಸಮಿತಿಯಲ್ಲಿ ಕೂಲಕುಂಷವಾಗಿ ಪರಿಶೀಲಿಸಿ ಅಂತಿಮವಾಗಿ ೧೯,೯೩,೫೦,೦೦೦ರೂ ಮೊತ್ತಕ್ಕೆ ಸೀಮಿತಗೊಳಿಸಿ ಅನುಮೋದನೆ ನೀಡಲಾಯಿತು.
ವೇದಿಕೆ ನಿರ್ಮಾಣ ಸಮಿತಿಗೆ ೫ ಕೋಟಿರೂ, ಆಹಾರ ಸಮಿತಿಗೆ ೫ ಕೋಟಿರೂ, ಮೆರವಣಿಗೆ ಸಮಿತಿಗೆ ೪೦ ಲಕ್ಷರೂ, ವಸತಿ ಸಮಿತಿಗೆ ೨ ಕೋಟಿರೂ, ಆರೋಗ್ಯ ಮತ್ತು ನೈಮಲ್ಯಕ್ಕೆ ೪೦ ಲಕ್ಷ, ಸಾಂಸ್ಕೃತಿಕ ತಂಡಗಳ ಆಯ್ಕೆ ಸಮಿತಿಗೆ ೪೨ ಲಕ್ಷ, ಸಾರಿಗೆ ಸಮಿತಿಗೆ ೧ ಕೋಟಿ, ನಗರ ಅಲಂಕಾರ ವಿದ್ಯುತ್ ಸಮಿತಿಗೆ ೫೦ ಲಕ್ಷ, ಪುಸ್ತಕ ಮಳಿಗೆ ವಸ್ತುಪ್ರದರ್ಶನ ಸಮಿತಿಗೆ ೫ ಲಕ್ಷ, ಮಾಧ್ಯಮ ಜಾಹೀರಾತು ಸೇರಿದಂತೆ ಪ್ರಚಾರ ಸಮಿತಿಗೆ ೧.೧೦ ಕೋಟಿರೂ, ಪ್ರತಿನಿಧಿಗಳ ನೋಂದಣಿ ಸಮಿತಿಗೆ ೬೨.೫೦ ಲಕ್ಷ, ಮಹಿಳಾ ಶಕ್ತಿ ಸಮಿತಿಗೆ ೨ ಲಕ್ಷ, ಆಮಂತ್ರಣ ಪತ್ರಿಕೆ ಸಮಿತಿಗೆ ೪.೫೦ ಲಕ್ಷರೂ, ಸ್ಮರಣಿಕೆಗೆ ೨೫ ಲಕ್ಷ, ಸ್ಮರಣ ಸಂಚಿಕೆ ಹಾಗೂ ೮೬ ಪುಸ್ತಕಗಳ ಮುದ್ರಣಕ್ಕಾಗಿ ೪೦ ಲಕ್ಷ, ವೇದಿಕೆ ನಿರ್ವಹಣೆ, ಶಾಲು ಹಾಗೂ ಮಾಲೆಗಾಗಿ ೫ ಲಕ್ಷ, ಸಿಸಿ ಟಿವಿ ಅಳವಡಿಕೆ ಸೇರಿದಂತೆ ಶಿಷ್ಟಾಚಾರ ಮತ್ತು ರಕ್ಷಣಾ ಸಮಿತಿಗೆ ೪೦ ಲಕ್ಷ, ಮಾಧ್ಯಮ ಕೇಂದ್ರ ಸ್ಥಾಪನೆ ಸೇರಿದಂತೆ ಮಾಧ್ಯಮ ಸಮನ್ವಯ ಸಮಿತಿಗೆ ೧ ಕೋಟಿ, ಸ್ವಯಂ ಸೇವಕರ ಆಯ್ಕೆ ಮತ್ತು ಉಸ್ತುವಾರಿಗೆ ೨೨.೫೦ ಲಕ್ಷ, ಶಿಷ್ಟಾಚಾರ ಪಾಲನೆಗೆ ೫ ಲಕ್ಷ, ಪಾಸ್ ಮತ್ತು ಬ್ಯಾಡ್ಜ್ ಮುದ್ರಣ ಸಮಿತಿಗೆ ೨೦ ಲಕ್ಷ, ಕನ್ನಡ ರಥ ಸಂಚಾರಕ್ಕೆ ೨೫ ಲಕ್ಷ, ಕನ್ನಡ ರಥ ಸಂಚಾರ ಸಂದರ್ಭದಲ್ಲಿ ರಾಜ್ಯದ ೩೦ ಜಿಲ್ಲೆಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಕಲಾ ತಂಡಗಳಿಗೆ ಗೌರವಧನವಾಗಿ ೩೦ ಲಕ್ಷ, ಸಮ್ಮೇಳನ ನಡೆಯುವ ಜಾಗ ನೀಡಿರುವ ರೈತರಿಗೆ ಪರಿಹಾರವಾಗಿ ೨೫ ಲಕ್ಷ ಅನುದಾನ ಹಂಚಿಕೆ ಮಾಡಲಾಗಿದೆ. ಈ ಅನುದಾನದಲ್ಲೇ ಜಿಎಸ್.ಟಿ. ತೆರಿಗೆಗಳು, ಇತರ ವೆಚ್ಚ ಭರಿಸಲು ಸಮಿತಿಯ ಸದಸ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿ.ಪಂ ಉಪ ಕಾರ್ಯದರ್ಶಿ ಎಸ್.ಜಿ.ಮುಳ್ಳಳ್ಳಿ, ಮುಖ್ಯ ಲೆಕ್ಕಾಧಿಕಾರಿ ವಸಂತಕುಮಾರ, ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕ ಬಸವರಾಜ ಅರಬಗೊಂಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಕಸಾಪ ತಾಲೂಕಾ ಅಧ್ಯಕ್ಷ ವೈ.ಬಿ.ಆಲದಕಟ್ಟಿ, ಎಸ್.ಎಫ್.ಎನ್.ಗಾಜೀಗೌಡ್ರ, ಸುಭಾಸ ಎಂ.ಗಡೆಪ್ಪನವರ, ಎಸ್.ಎನ್.ದೊಡ್ಡಗೌಡರ, ರಾಣೇಬೆನ್ನೂರಿನ ಜಿ.ಜಿ.ಹೊಟ್ಟೆಗೌಡರ, ವಿರೇಶ ಮೊಟಗಿ, ತಿಪ್ಪಣ್ಣ ಯ.ಸುಬಣ್ಣನವರ, ಬಿ.ಪಿ.ಶಿಡೇನೂರ, ಎಂ.ಎಸ್.ಅರಕೆರಿ, ಪಿಡಿ ಶಿರೂರ, ಹನುಮಂತಗೌಡ ಭೀಮಣ್ಣನವರ, ಲಿಂಗರಾಜ ಬಿ.ಹಿರೇಮಠ ಸೇರಿದಂತೆ ಇತರರಿದ್ದರು.