Thursday, August 11, 2022

Latest Posts

ಕನ್ನಡಕ್ಕಾಗಿ ನಾವು ಅಭಿಯಾನ: ಕೆಲವೇ ಕ್ಷಣದಲ್ಲಿ ಮೊಳಗಲಿದೆ ಲಕ್ಷ ಕಂಠಗಳ ಗೀತಗಾಯನ ಸಂಭ್ರಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಇಂದು ಲಕ್ಷ ಕಂಠಗಳ ಕನ್ನಡ ಗೀತಗಾಯನ ಕಾರ್ಯಕ್ರಮ ನಡೆಸಲು ಸಕಲ ಸಿದ್ಧತೆ ಆರಂಭವಾಗಿದೆ.
ಕನ್ನಡಕ್ಕಾಗಿ ನಾವು ಅಭಿಯಾನದ ಅನ್ವಯ ಇಂದು ಐದು ಲಕ್ಷ ಮಂದಿ ಹಾಡಲಿದ್ದಾರೆ. ವಿಶ್ವದಾದ್ಯಂತ ಒಂದು ಸಾವಿರ ಸ್ಥಳಗಳಲ್ಲಿ ಸಾಮೂಹಿಕ ಗೀತ ಗಾಯನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ವಿಧಾನಸೌಧದ ಮೆಟ್ಟಿಲುಗಳ ಮೇಲೂ ಗಾಯನ ನಡೆಯಲಿದೆ.
ಬೆಳಗ್ಗೆ 11 ರಿಂದ 11:30 ವರೆಗೆ ಗಾಯನ ಕಾರ್ಯಕ್ರಮ ನಡೆಯಲಿದೆ. ಕನ್ನಡದ ಮೂರು ಹಾಡುಗಳನ್ನು ಹಾಡುವಂತೆ ಸರ್ಕಾರ ಮನವಿ ಮಾಡಿದೆ. ‘ಹುಟ್ಟಿದರೆ ಕನ್ನಡ ನಾಡಲ್ಲೇ ಹುಟ್ಟಬೇಕು’,’ ಬಾರಿಸು ಕನ್ನಡ ಡಿಂಡಿಮವ ‘ಮತ್ತು ‘ಜೋಗದ ಸಿರಿ ಬೆಳಕಿನಲ್ಲಿ’ ಹಾಡುಗಳನ್ನು ಹಾಡಲಾಗುತ್ತದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಯೂ ಹಾಡುಗಳನ್ನು ಹಾಡಲಾಗುತ್ತದೆ. ಜೊತೆಗೆ ಮೆಟ್ರೋದ ಎಲ್ಲ ರೈಲುಗಳಲ್ಲಿಯೂ ಸುಗಮ ಸಂಗೀತ ಗಾಯನ ತಂಡಗಳು ಈ ಮೂರು ಗೀತೆಗಳನ್ನು ಹಾಡುತ್ತವೆ. ಮೆಟ್ರೋದ ಎಲ್ಲ 51 ನಿಲ್ದಾಣಗಳಲ್ಲಿ ಧ್ವನಿವರ್ಧಕಗಳ ಮೂಲಕ ಹಾಡು ಪ್ರಸಾರವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss