ಕಾನ್ಪುರ ಮನಿ ಹೀಸ್ಟ್: ಬ್ಯಾಂಕ್ ದೋಚಲು 10 ಅಡಿ ಸುರಂಗ ಕೊರೆದ ಖದೀಮರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಕಾನ್ಪುರದಲ್ಲಿ ಬ್ಯಾಂಕ್ ದೋಚಲು ಕಳ್ಳರು 10 ಅಡಿ ಸುರಂಗ ಕೊರೆದಿದ್ದಾರೆ.
ಸುರಂಗದ ಮೂಲಕ ತೆರಳಿ ಬ್ಯಾಂಕ್‌ನಲ್ಲಿದ್ದ ಒಂದು ಕೋಟಿ ರೂ. ಮೌಲ್ಯದ ಚಿನ್ನ ದೋಚಿ ಪರಾರಿಯಾಗಿದ್ದಾರೆ.

ಕಾನ್ಪುರದ ಬಾನುತಿ ಶಾಖೆಯಲ್ಲಿ ಕಳ್ಳತನ ನಡೆದಿದ್ದು, ನಾಲ್ಕು ಅಡಿ ಅಗಲ, 10 ಅಡಿ ಉದ್ದದ ಸುರಂಗ ಕೊರೆದು ಬ್ಯಾಂಕ್‌ನ ಸ್ಟ್ರಾಂಗ್ ಲಾಕ್ ರೂಂ ಪ್ರವೇಶಿಸಿದ್ದಾರೆ.

ಸ್ಟ್ರಾಂಗ್ ರೂಮ್‌ನಲ್ಲಿದ್ದ ಲಾಕರ್ ಒಡೆದು ಒಂದು ಕೋಟಿ ರೂ. ಮೌಲ್ಯದ 1.8 ಕೆ.ಜಿ ಚಿನ್ನಾಭರಣ ದೋಚಿದ್ದಾರೆ. ಆದರೆ ನಗದು ಲಾಕರ್ ಒಡೆಯಲು ಅವರಿಗೆ ಸಾಧ್ಯವಾಗಿಲ್ಲ. ಲಾಕರ್‌ನಲ್ಲಿ 32 ಲಕ್ಷ ರೂ. ಹಣವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಫಿಲ್ಮಿ ರೀತಿಯಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕಿದ ಕಳ್ಳರ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!