ಕಾಂತಾರ ಅಬ್ಬರ: ಬಾಲಿವುಡ್ ನಲ್ಲಿ 100 ಕೋಟಿ ರೂ. ಕಲೆಕ್ಷನ್ ನತ್ತ ರಿಷಬ್ ಸಿನಿಮಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ವಿಶ್ವದಲ್ಲಿ ಅಬ್ಬರಿಂದ ಮುನ್ನುಗುತ್ತಿರುವ ಸಿನಿಮಾ ಕಾಂತಾರ. ಈಗಾಗಲೇ ನೋಡುಗರ ಮೆಚ್ಚುಗೆಪಡೆದ ಸಿನಿಮಾ ಎಲ್ಲಾ ಭಾಷೆಯಲ್ಲೂ ಹಿಟ್ ಆಗಿದ್ದು, ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಮಾಡುತ್ತಿದೆ.

ಬಾಲಿವುಡ್ ನಲ್ಲಿ ಅನೇಕ ಸಿನಿಮಾಗಳು ಜನರನ್ನು ತಲುಪುವಲ್ಲಿ ವಿಫಲವಾಗುತ್ತಿರುವ ಈ ಕ್ಷಣ ಕಾಂತಾರ ಅಲ್ಲೂ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬೀಳದೇ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಸದ್ಯ ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂ. ಕಲೆಕ್ಷನ್ ಮಾಡುವತ್ತ ಮುನ್ನುಗ್ಗುತ್ತಿದೆ.

ಕನ್ನಡ, ತೆಲುಗು, ತಮಿಳು, ಹಿಂದಿಯಲ್ಲೂ ಸೂಪರ್ ಸಕ್ಸಸ್ ಕಾಣುತ್ತಿರುವ ಸಿನಿಮಾ ವರ್ಲ್ಡ್ ವೈಡ್ ಕಲೆಕ್ಷನ್ 400 ಕೋಟಿಯತ್ತ ಮುನ್ನುಗ್ಗುತ್ತಿರುವಾಗ ಈ ಕ್ಷಣ ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂ. ಕಲೆಕ್ಷನ್ ಮಾಡುವತ್ತ ಸಿನಿಮಾ ಸೌಂಡ್ ಮಾಡುತ್ತಿದೆ.
ಈಗಾಲೇ 80 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವಸಿನಿಮಾ ಈಗ ರಿಲೀಸ್ ಆಗಿರುವ ಬಿಗ್ ಬಿ(Big B) ನಟನೆಯ `ಉಂಚೈ’ ಚಿತ್ರಕ್ಕೂ ಸೆಡ್ಡು ಹೊಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!