ಬಾಲಿವುಡ್ ನಲ್ಲಿ ಕಾಂತಾರ ಅಬ್ಬರ: ಶತದಿನ ಪೂರೈಸಿದ ಕನ್ನಡ ಸಿನಿಮಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ `ಕಾಂತಾರ’ ಇಡೀ ವಿಶ್ವದಲ್ಲೇ ಅಬ್ಬರಿಸಿದ್ದು, ಹಿಂದಿ ಅವತರಣಿಕೆಯಲ್ಲೂ ಕನ್ನಡ ಸಿನಿಮಾ ಉತ್ತಮ ಮೆಚ್ಚುಗೆ ಪಡೆದು ನೂರು ದಿನಗಳನ್ನ ಪೂರೈಸಿದೆ.

ಬಾಲಿವುಡ್ ಸಿನಿಪ್ರೇಕ್ಷಕರು, ಗಣ್ಯರು ಕೂಡ`ಕಾಂತಾರ’ ಸಿನಿಮಾವನ್ನು ಇಷ್ಟಪಟ್ಟಿದ್ದು, ಯಶಸ್ವಿಯಾಗಿದೆ.

2022, ಸೆ.30 ರಿಲೀಸ್ ಆದ ಕಾಂತಾರ ಸಿನಿಮಾಗೆ ದೇಶದ ಏಲ್ಲಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಾಲಿವುಡ್ ಬಾಕ್ಸಾಫೀಸ್‌ನಲ್ಲೂ `ಕಾಂತಾರ’ ಚಿತ್ರ ಗೆದ್ದು ಬೀಗಿದೆ.

ಚಿತ್ರದ ಸಕ್ಸಸ್ ಕುರಿತು ರಿಷಬ್ ಶೆಟ್ಟಿ, ಹೊಂಬಾಳೆ ಸಂಸ್ಥೆ ಟ್ವೀಟ್ ಮಾಡಿದ್ದಾರೆ. ಹಿಂದಿಯಲ್ಲಿ `ಕಾಂತಾರ’ 100 ದಿನಗಳನ್ನ ಪೂರೈಸಿದೆ ಎಂದು ಹೇಳಲು ನಾವು ಸಂಭ್ರಮಿಸುತ್ತೇವೆ. ಹಿಂದಿ ಚಿತ್ರರಂಗದ ಬೆಂಬಲಕ್ಕಾಗಿ ನಾವು ಪ್ರೇಕ್ಷಕರಿಗೆ ಕೃತಜ್ಞೆತೆಗಳನ್ನು ತಿಳಿಸುತ್ತೇವೆ ಎಂದಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಧನ್ಯವಾದ ತಿಳಿಸಿದ್ದಾರೆ.

ಇನ್ನೂ ʻಹೊಂಬಾಳೆ ಸಂಸ್ಥೆʼ ನಿರ್ಮಾಪಕ ವಿಜಯ್ ಕಿರಗಂದೂರು ಇತ್ತೀಚಿನ ಸಂದರ್ಶನವೊಂದರಲ್ಲಿ `ಕಾಂತಾರ 2′ ಸಿನಿಮಾ ಮಾಡುವ ಕುರಿತಾಗಿ ಮಾತನಾಡಿದ್ದಲ್ಲದೇ, ಸಿನಿಮಾ ಶೂಟಿಂಗ್ ಮತ್ತು ರಿಲೀಸ್ ದಿನಾಂಕವನ್ನೂ ಅವರು ಘೋಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!