‘ಕಾಂತಾರ’ ಶಿವನ ಪಾತ್ರದಲ್ಲಿ ಅಪ್ಪು: ಪುನೀತ್ ಕಂಡು ಖುಷಿಪಟ್ಟ ಅಭಿಮಾನಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಕ್ಸಾಫೀಸ್‌ನಲ್ಲಿ ಲೂಟಿ ಮಾಡುತ್ತಿರುವ `ಕಾಂತಾರ’ ಸಿನಿಮಾ ಇಡೀ ವಿಶ್ವದಲ್ಲೇ ಅಭಿಮಾನಿಗಳನ್ನು ತನ್ನತ್ತ ಸೆಳೆಯುವಲ್ಲಿ ಸಕ್ಸಸ್ ಕಂಡಿದೆ.

ಶಿವನ ಪಾತ್ರದಲ್ಲಿ ಮಿಂಚಿ ಗಮನ ಸೆಳೆದ ರಿಷಬ್ ಶೆಟ್ಟಿಗೆ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿಂದೆ `ಕಾಂತಾರ’ ಶಿವನ ಪಾತ್ರಕ್ಕೆ ಪುನೀತ್‌ ರಾಜ್ಯ್ ಕುಮಾರ್ ನಟಿಸಲು ಕೇಳಲಾಗಿತ್ತು. ಆದರೆ ಅಪ್ಪು ಈ ಚಿತ್ರದಲ್ಲಿ ನಟಿಸಿಲ್ಲ. ಆದರೆ ಇದೀಗ ಅಪ್ಪು ನಟಿಸಿದ್ದರೆ ಹೇಗಿರುತ್ತಿತ್ತು ಎಂಬ ಪರಿಕಲ್ಪನೆಯಲ್ಲಿ ಪೋಸ್ಟರ್ ಮಾಡಲಾಗಿದೆ. ಈ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಅಭಿಮಾನಿಯೊಬ್ಬರ ಕಲ್ಪನೆಯಲ್ಲಿ ಮೂಡಿಬಂದ ಪೋಸ್ಟರ್ ವೈರಲ್ ಆಗಿದೆ. ಪುನೀತ್ `ಕಾಂತಾರ’ ಶಿವನಾಗಿ ಕಾಣಿಸಿಕೊಂಡಿದ್ದರೆ ಹೇಗಿರುತ್ತಿತ್ತು ಎಂದು ಅಭಿಮಾನಿಯೊಬ್ಬರು ತನ್ನ ಕಲ್ಪನೆಯಲ್ಲಿ ಪೋಸ್ಟರ್ ಮಾಡಿದ್ದಾರೆ.

ಈ ಪೋಸ್ಟರ್ ಡಿಸೈನ್ ಮಾಡಿದ್ದು ಡಿಜಿಟಲ್ ಆರ್ಟಿಸ್ಟ್ ಕುಶಾಲ್ ಹಿರೇಮಠ್. ಪುನೀತ್ ಅವರ ಬೇರೆ ಫೋಟೋವನ್ನು ಬಳಸಿಕೊಂಡು ಈ ರೀತಿ ವಿನ್ಯಾಸ ಮಾಡಲಾಗಿದೆ. `ಕಾಂತಾರ’ ಚಿತ್ರದ ಹೀರೋ ಶಿವನ ಪಾತ್ರವನ್ನು ಪುನೀತ್ ನಿರ್ವಹಿಸಿದ್ದರೆ ಅವರ ಗೆಟಪ್ ಹೇಗಿರುತ್ತಿತ್ತು ಎಂದು ಈ ರೀತಿಯಾಗಿ ಅವರು ಕಲ್ಪಿಸಿಕೊಂಡು ಡಿಸೈನ್ ಮಾಡಿದ್ದಾರೆ. ಈ ಫೋಟೋ ನೋಡಿ ಪುನೀತ್ ಅಭಿಮಾನಿಗಳು ಭಾವುಕರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!