ಒಂದರ ಮೇಲೊಂದು ದಾಖಲೆ ಮುರಿಯುತ್ತಿದೆ ಕಾಂತಾರ, ರಾಜ್ಯದಲ್ಲಿ ಒಂದು ಕೋಟಿ ಟಿಕೆಟ್ಸ್ ಮಾರಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ಸೃಷ್ಟಿ ಮಾಡುತ್ತಿರುವ ಕಾಂತಾರ ಸಿನಿಮಾದ ಒಂದು ಕೋಟಿ ಟಿಕೆಟ್ಸ್ ರಾಜ್ಯದಲ್ಲಿ ಬಿಕರಿಯಾಗಿದೆ. ಸಿನಿಮಾ ಬಿಡುಗಡೆಯಾಗಿ ಒಂದೂವರೆ ತಿಂಗಳಾದರೂ ಇನ್ನೂ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಾಂತಾರಾ ಸಿನಿಮಾವನ್ನು ಪ್ರೇಕ್ಷಕರು ಥಿಯೇಟರ್‌ಗಳಲ್ಲಿಯೇ ನೋಡಿ ಖುಷಿ ಪಟ್ಟಿದ್ದಾರೆ.

ಒಂದು ಕೋಟಿ ಟಿಕೆಟ್‌ಗಳು ಮಾರಾಟವಾಗಿದ್ದು, ಹೊಂಬಾಳೆ ಫಿಲ್ಮ್ಸ್ ಖುಷಿಯಲ್ಲಿ ಹಿಗ್ಗಿದೆ. ಕಾಂತಾರ ರಿಲೀಸ್ ಆದಾಗಿನಿಂದ ರಿಲೀಸ್ ಆದ ಯಾವುದೇ ಸಿನಿಮಾ ಇಷ್ಟರ ಮಟ್ಟಿಗೆ ಯಶಸ್ಸು ಕಂಡಿಲ್ಲ. ಬಾಲಿವುಡ್‌ನ ಘಟಾನುಘಟಿಗಳ ಸಿನಿಮಾಗಳು ಕೂಡ ನೆಲಕಚ್ಚಿವೆ.

ಸಿಕ್ಕಾಪಟ್ಟೆ ಲಾಭ ಮಾಡಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ ಒಂದು ಕೋಟಿ ಟಿಕೆಟ್ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದೆ. ಕೆಜಿಎಫ್ ನಂಥ ಸಿನಿಮಾ ಮಾಡಿದ ಹೊಂಬಾಳೆ ಪ್ಯಾನ್ ಮಟ್ಟದಲ್ಲಿ ಹೆಸರು ಮಾಡಿತ್ತು. ಇದೀಗ ಹೊಂಬಾಳೆ ಬ್ಯಾನರ್‌ನಲ್ಲಿ ರಿಲೀಸ್ ಆದ ಎಲ್ಲ ಸಿನಿಮಾಗಳಿಂದ ಹೆಚ್ಚಾಗಿ ಕಾಂತಾರ ಯಶಸ್ಸು ನೀಡಿದೆ. ರಾಜ್ಯದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಸಿನಿಮಾ ಕಾಂತಾರ ಆಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!