CINE NEWS | ಆಸ್ಕರ್ ರೇಸ್‌ನಲ್ಲಿ ಸ್ಪರ್ಧಿಸೋಕೆ ಕಾಂತಾರ ರೆಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದ ಸಿನಿಮಾವೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಕನ್ನಡ ಭಾಷೆಯಲ್ಲಿ ಮಾತ್ರ ಇದ್ದ ಸಿನಿಮಾವನ್ನು ನೋಡಬೇಕು ಎಂದು ಅನ್ಯಭಾಷೀಯರು ಬಯಸಿದ್ದಕ್ಕೆ ಬೇರೆ ಭಾಷೆಗಳಲ್ಲಿಯೂ ಕಾಂತಾರ ಡಬ್ ಆಗಿದೆ.

ಕಾಂತಾರ ಸಿನಿಮಾ ಹೊಗಳದವರಿಲ್ಲ ಎನ್ನುವ ಮಟ್ಟಿಗೆ ಸದ್ದು ಮಾಡಿದ್ದು, ಇದೀಗ ಆಸ್ಕರ್ ರೇಸ್‌ಗೆ ಕಾಂತಾರ ಎಂಟ್ರಿ ನೀಡಿದೆ. ಕೊನೆ ಕ್ಷಣದಲ್ಲಿ ಆಸ್ಕರ್ ನಾಮಿನೇಷನ್ಸ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ.

ಆರ್‌ಆರ್‌ಆರ್ ಮಾದರಿಯಲ್ಲೇ ಕಾಂತಾರ ಕೂಡ ಆಸ್ಕರ್‌ಗೆ ತೆರಳಲು ಯತ್ನಿಸಿದೆ. ಇದೇ ಮೊದಲು ಆಸ್ಕರ್‌ಗೆ ಕನ್ನಡದ ಸಿನಿಮಾ ಹೋಗುತ್ತಿದೆ. ಅಂತಿಮ ಪಟ್ಟಿ ಇನ್ನೂ ಬಂದಿಲ್ಲ. ಕಾಂತಾರ ಕಥೆಗೆ ವಿಶ್ವವನ್ನೇ ಮೆಚ್ಚಿಸುವ ಶಕ್ತಿ ಇದೆ ಎಂದು ಹೇಳಿದ್ದಾರೆ.

ಸಿನಿಮಾ ರಿಲೀಸ್ ಆಗಿ 50 ದಿನಗಳೇ ಕಳೆದಿದ್ರು ಕಾಂತಾರ ಕ್ರೇಜ್ ಕಡಿಮೆಯಾಗಿಲ್ಲ. ಸಿನಿಮಾ ಒಟಿಟಿಗೆ ಬಂದ ನಂತರವೂ ದೊಡ್ಡ ಪರದೆಯಲ್ಲೇ ಸಿನಿಮಾ ನೋಡಬೇಕು ಎಂದು ಬಯಸಿ ಅಭಿಮಾನಿಗಳು ಥಿಯೇಟರ್ ಹೋಗುತ್ತಿದ್ದಾರೆ. ರಿಷಭ್ ಶೆಟ್ಟಿ ಇದ್ದಕ್ಕಿದ್ದಂತೆಯೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ಇದೀಗ ಆಸ್ಕರ್‌ನಲ್ಲಿ ಚಿತ್ರ ಮಿಂಚಲಿದೆಯಾ ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!