ಕೆಜಿಎಫ್ ರೆಕಾರ್ಡ್ ಹಿಂದಿಕ್ಕಿ ಭರ್ಜರಿ ಪ್ರದರ್ಶನ ಕಾಣುತ್ತಿದೆ ಕಾಂತಾರಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಿಷಭ್ ಶೆಟ್ಟಿ ಅವರ ಕಾಂತಾರಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ಸ್ ಮಾಡುತ್ತಿದೆ.
ಎರಡನೇ ಸೋಮವಾರದಂದು ಕಾಂತಾರಾ 4.50 ಕೋಟಿ ಕಲೆಕ್ಷನ್ ಪಡೆದಿದೆ. ಕೆಜಿಎಫ್ 2 ಎರಡನೇ ಸೋಮವಾರದಂದು 3.30 ಕೋಟಿ ಕಲೆಕ್ಷನ್ ಮಾಡಿತ್ತು.

ಒಟ್ಟಾರೆ ಕಾಂತಾರಾ ಈವರೆಗೂ 48.50 ಕೋಟಿ ಕಲೆಕ್ಷನ್ ಮಾಡಿದೆ. ಇನ್ನೂ ಬೇರೆ ಭಾಷೆಗಳಿಗೆ ಕಾಂತಾರಾ ಡಬ್ ಆಗುತ್ತಿದ್ದು, ಮುಂದಿನ ವಾರ ತೆರೆಕಾಣಲಿದೆ. ಆಗ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈವರೆಗೂ ಕಾಂತಾರಾ ಸಿನಿಮಾ ನೋಡಿ ಬಂದವರ‍್ಯಾರೂ ಸಿನಿಮಾ ಬಗ್ಗೆ ನೆಗೆಟಿವ್ ಕಮೆಂಟ್ ನೀಡಿಲ್ಲ, ಕಥೆಯ ಮೊದಲ ನಿಮಿಷದಿಂದ ಕಡೆಯವರೆಗೂ ಸಿನಿಮಾ ಮಿಸ್ ಮಾಡುವಂತಿಲ್ಲ ಎಂದು ಅಭಿಮಾನಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!