ಸದ್ಯದಲ್ಲೇ ತುಳು ಭಾಷೆಯಲ್ಲಿ ತೆರೆಗೆ ಬರಲಿದೆ ಕಾಂತಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಿಶಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ ಚಿತ್ರ ದೇಶದ ಬ್ಲಾಕ್‌ ಬಾಸ್ಟರ್‌ ಹಿಟ್‌ ಎನಿಸಿಕೊಂಡಿದೆ. ಚಿತ್ರ 350  ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ ಸಿನಿಪ್ರಿಯರ ಮೆಚ್ಚುಗೆ ಪಾತ್ರವಾಗಿದೆ. ಇದೀಗ ಚಿತ್ರದ ಕುರಿತಾಗಿ ಮತ್ತೊಂದು ಅಪ್‌ ಡೇಟ್‌ ಹೊರಬಿದ್ದಿದ್ದು, ʼಕಾಂತಾರ’ ಸಿನಿಮಾ ತುಳು ಭಾಷೆಯಲ್ಲಿ ಶ್ರೀಘ್ರವೇ ತೆರೆಮೇಲೆ ಬರಲಿದೆ.
ಎರಡು ತಿಂಗಳ ಹಿಂದೆ ಚಿತ್ರ ಬಿಡುಗಡೆಯಾದಾಗಿನಿಂದ, ಕಾಂತಾರ ಅವರ ತುಳು ಆವೃತ್ತಿಗೆ ಹೆಚ್ಚಿನ ಬೇಡಿಕೆಯಿದೆ. ಚಿತ್ರದಲ್ಲಿ ಕರಾವಳಿ ಸಂಸ್ಕೃತಿ ಮತ್ತು ಕಲೆ ಬೇರೂರಿದೆ. ದೈವಾರಾಧನೆಯ ಆಚರಣೆಗಳು ಮತ್ತು ಭೂತ ಕೋಲವು ತುಳುನಾಡಿನ ಸಂಸ್ಕೃತಿಯಾಗಿದೆ. ಚಿತ್ರವನ್ನು ತು ಸಿನಿಮಾದ ಮೈಲೇಜ್ ಹೆಚ್ಚಲು ಸಿನಿಮಾದಲ್ಲಿ ತೋರಿಸಿರುವ ದೈವಗಳ ವಿಚಾರವೂ ಕೂಡ ಪ್ರಮುಖವಾಗಿದೆ. ಈಗ ‘ಕಾಂತಾರ’ ಚಿತ್ರವನ್ನು ತುಳುವಿಗೆ ಡಬ್ ಮಾಡಲಾಗುತ್ತಿದೆ. ಈ ವಿಚಾರವನ್ನು ಹೊಂಬಾಳೆ ಫಿಲ್ಮ್ಸ್​​ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅವರು ಖಚಿತಪಡಿಸಿದ್ದಾರೆ.
ಚಿತ್ರದಲ್ಲಿ ಸ್ಥಳೀಯ ಕಲಾವಿದರೇ ಹೆಚ್ಚಾಗಿರುವುದರಿಂದ ಅವರೆಲ್ಲರೂ ತಾವೇ ಡಬ್ಬಿಂಗ್ ಮಾಡಲಿದ್ದಾರೆ. ಇದರಲ್ಲಿ ಪ್ರಕಾಶ್ ತೂಮಿನಾಡ್, ದೀಪಕ್ ರೈ ಪಾಣಾಜೆ, ನವೀನ್ ಡಿ ಪಡೀಲ್, ಮೈಮ್ ರಾಮದಾಸ್, ರಘು ಪಾಂಡೇಶ್ವರ್, ಪುಷ್ಪರಾಜ್ ಬೋಳಾರ್ ಸೇರಿದಂತೆ ಖ್ಯಾತನಾಮರಿದ್ದಾರೆ. ರಿಷಬ್ ಶೆಟ್ಟಿ, ಅರ್ಜುನ್ ಕಾಪಿಕಾಡ್, ಹಾಗೂ ಸಪ್ತಮಿ ಗೌಡ ಸಹ ತಮ್ಮ ಪಾತ್ರಗಳಿಗೆ ಡಬ್ಬಿಂಗ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!