ಕನ್ಹಯ್ಯ ಲಾಲ್‌ ಕುಟುಂಬಕ್ಕೆ 1.70 ಕೋಟಿ ಸಂಗ್ರಹಿಸಿದ ಕಪಿಲ್ ಮಿಶ್ರಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟೇಲರ್ ಕನ್ಹಯ್ಯ ಲಾಲ್‌ ಕುಟುಂಬಕ್ಕೆ ಬಿಜೆಪಿ ನಾಯಕ ಕಪಿಲ್ ಮಿಶ್ರಾ ದೇಣಿಗೆ ಸ್ವರೂಪದಲ್ಲಿ ಸಂಗ್ರಹಿಸಿ 1 ಕೋಟಿ ನೆರವು ಒದಗಿಸಿದ್ದಾರೆ.
ಕನ್ಹಯ್ಯಲಾಲ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದ ಮಿಶ್ರಾ, ನಮಗೆ 1 ಕೋಟಿ ಸಂಗ್ರಹಿಸುವ ಗುರಿ ಇತ್ತು.ಆದರೆ, ಈಗಾಗಲೇ 1.70 ಕೋಟಿ ಸಂಗ್ರಹವಾಗಿದೆ ಎಂದರು.
ಉಳಿದಂತೆ, ಹತ್ಯೆ ವೇಳೆ ಗಾಯಗೊಂಡಿರುವ ಈಶ್ವರ್ ಅವರಿಗೆ 25 ಲಕ್ಷ, ರಾಜಸಮದ್ ಜಿಲ್ಲೆಯಲ್ಲಿ ಗುಂಪು ಹಲ್ಲೆಯಿಂದ ಗಾಯಗೊಂಡಿರುವ ಕಾನ್‌ಸ್ಟೆಬಲ್ ಸಂದೀಪ್ ಅವರಿಗೆ 5 ಲಕ್ಷ, ಮಹಾರಾಷ್ಟ್ರದ ಅಮರಾವತಿಯಲ್ಲಿ ಕೊಲೆಗೀಡಾದ ಉಮೇಶ್‌ ಪ್ರಹ್ಲಾದರಾವ್ ಕೊಲ್ಹೆ ಅವರ ಕುಟುಂಬಕ್ಕೆ 30 ಲಕ್ಷ ಆರ್ಥಿಕ ನೆರವು ನೀಡಲಾಗುವುದು ಎಂದು ಮಿಶ್ರಾ ಪ್ರಕಟಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!