ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ಬಾಲಿವುಡ್ ಹಾಗೂ ಅಭಿಮಾನಿಗಳು ವಿಕ್ಕಿ ಕೌಶಲ್- ಕಟ್ರೀನಾ ಮದುವೆಗೆ ಕಾದು ಕುಳಿತಿದ್ದಾರೆ.
ಮದುವೆಗೆ ಇನ್ನೇನು ದಿನಗಣನೆ ಇರುವಾಗ್ಲೂ ಇವರಿಬ್ಬರೂ ತಮ್ಮ ಮದುವೆ ಬಗ್ಗೆ ಮಾತನಾಡ್ತಿಲ್ಲ.
ಇವರಿಬ್ಬರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ? ಈ ಲವ್ ಸ್ಟೋರಿ ಹುಟ್ಟೋಕೂ ಕರಣ್ ಜೋಹರ್ ಕಾರಣವಂತೆ, ಹೇಗೆ ನೋಡಿ..
ಕಾಫಿ ವಿತ್ ಕರಣ್ ಶೋನಲ್ಲಿ ಒಮ್ಮೆ ಕಟ್ರೀನಾ ಬಂದಾಗ ಕರಣ್ ‘ಆನ್ಸ್ಕ್ರೀನ್ನಲ್ಲಿ ನಿಮ್ಮ ಜೋಡಿ ಯಾರ ಜೊತೆ ಚೆನ್ನಾಗಿ ಕಾಣುತ್ತದೆ’ ಎಂದು ಕೇಳಿದ್ದರು. ಅದಕ್ಕೆ ಕಟ್ರೀನಾ ಕೈಫ್ ‘ವಿಕ್ಕಿ ಕೌಶಲ್’ ಎಂದಿದ್ರು.
ಇದಾದ ನಂತರ ವಿಕ್ಕಿ ಕೌಶಲ್ ಬಂದಾಗ ಕಟ್ರೀನಾ ಹೀಗೆ ಹೇಳಿದ್ರು ಅಂತ ಕರಣ್ ಹೇಳಿದ್ರು. ಆಗ ವಿಕ್ಕಿ ನಾಚಿಕೆಯಿಂದ ನೀರಾಗಿದ್ದಾರೆ. ಇಲ್ಲಿಂದಲೇ ಇವರ ಲವ್ಸ್ಟೋರಿ ಆರಂಭವಾಗಿದೆ.