ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅರ್ಧ ಚಿತ್ರೀಕರಣ ಮುಗಿದ ಮೇಲೆ ಕಾರ್ತಿಕ್ ಆರ್ಯನ್ ಕೈಬಿಟ್ಟು 20 ಕೋಟಿ ಕಳಕೊಂಡ ಕರಣ್ ಜೋಹರ್!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಸಿನಿಮಾ ಶುರು ಮಾಡೋಕು ಮುಂಚೆ ಹೀರೋ-ಹೀರೋಯಿನ್‌ಗಳನ್ನು ರಿಪ್ಲೇಸ್ ಮಾಡೋದು ಸಾಮಾನ್ಯ. ಆದರೆ ಸಿನಿಮಾ ಶೂಟಿಂಗ್ ಅರ್ಧ ಮುಗಿದ ಮೇಲೆ ಹೀರೋ ರಿಪ್ಲೇಸ್ ಮಾಡೋದು ತುಂಬಾನೇ ರೇರ್!
ಆದರೆ ಬಾಲಿವುಡ್ ಬಿಗ್ ನಿರ್ದೇಶಕ ಕರಣ್ ಜೋಹರ್ ತಮ್ಮ ದೋಸ್ತಾನಾ-2 ಸಿನಿಮಾದ ಹೀರೋ ಕಾರ್ತಿಕ್ ಆರ್ಯನ್‌ರನ್ನು ಬದಲಾಯಿಸಿದ್ದಾರೆ.
ಇದರಿಂದ ಧರ್ಮ ಪ್ರೊಡಕ್ಷನ್‌ಗೆ 20 ಕೋಟಿ ರೂ. ಲಾಸ್ ಆಗಿದೆ. ಲಾಸ್ ಆದರೂ ಪರವಾಗಿಲ್ಲ ಆದರೆ ಕಾರ್ತಿಕ್‌ರನ್ನು ಟಾಲರೇಟ್ ಮಾಡೋಕೆ ಆಗಲ್ಲ ಅಂತ ಕರಣ್ ಜೋಹರ್ ಹೇಳಿದ್ದಾರೆ.
ಸ್ಕ್ರಿಪ್ಟ್‌ನ ಎರಡನೇ ಭಾಗ ಕಾರ್ತಿಕ್ ಅವರಿಗೆ ತೃಪ್ತಿ ತಂದಿರಲಿಲ್ಲ. ಹಾಗಾಗಿ ಕಾರ್ತಿಕ್ ಪದೇ ಪದೆ ಸ್ಕ್ರಿಪ್ಟ್‌ನಲ್ಲಿ ಮೂಗು ತೂರಿಸುತ್ತಿದ್ದರು ಎಂದು ಕರಣ್ ಹೇಳಿದ್ದಾರೆ. ಫ್ರೊಫೆಶನಲ್ ನಡತೆ ಸರಿ ಇಲ್ಲ ಹಾಗೂ ಸ್ಕ್ರಿಪ್ಟ್ ಮಧ್ಯೆ ಮೂಗು ತೂರಿಸೋದು ಇಷ್ಟ ಆಗೋದಿಲ್ಲ ಅಂತ ಕಾರ್ತಿಕ್‌ರನ್ನು ಸಿನಿಮಾದಿಂದ ಹೊರಕಳಿಸಿದ್ದೇವೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss