ಕರಾಸ್ತ್ರ ಚಿತ್ರ ಬಿಡುಗಡೆಗೆ ಸಿದ್ಧ: ಸಿನಿಮಾದಲ್ಲಿದೆ ದ್ವಾಪರ- ಕಲಿಯುಗದ ಕಥೆ

ಹೊಸದಿಗಂತ ವರದಿ, ಹುಬ್ಬಳ್ಳಿ
ಶಿವಶಕ್ತಿ ಸಿನಿ ಕಂಬೈನ್ಸ್ ಅವರ ಕರಾಸ್ತ್ರ ಚಿತ್ರದ ಸಂಪೂರ್ಣ ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ ಸಿದ್ದವಾಗಿದೆ ಎಂದು ನಿರ್ದೇಶಕ ನಾರಾಯಣ ಪೂಜಾರ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿನಿಮಾ‌ ಕೌಟುಂಬಿಕ, ಭಾವನಾತ್ಮಕ ಮತ್ತು ಸಾಹಸಮಯವಾಗಿದೆ. ದ್ವಾಪರ ಯುಗದಲ್ಲಿ ಆದಂತಹ ಸಮಸ್ಯೆಗೆ ಕಲಿಯುಗದಲ್ಲಿ ಪರಿಹಾರ ಹುಡುಕಲು ಬರುವ ನಾಯಕಿ ಇಲ್ಲಿ ಯಾವ ರೀತಿಯ ಸನ್ನಿವೇಶಗಳನ್ನು ಎದುರಿಸುತ್ತಾಳೆ ಎಂಬ ಅಂಶ ಇಟ್ಟುಕೊಂಡು ಚಿತ್ರಕಥೆ ಹೆಣೆಯಲಾಗಿದೆ ಎಂದು ಮಾಹಿತಿ ನೀಡಿದರು. ಚಿತ್ರದಲ್ಲಿ ರಿಯಲ್ ಕರಾಟೆ ಪಟುಗಳು ಮತ್ತು ನಾಲ್ವರು ಪ್ರಖ್ಯಾತ ರಂಗಭೂಮಿ ಕಲಾವಿದರು ನಟಿಸಿರುವುದು ವಿಶೇಷ ಎಂದರು. ಕಾರ್ಯಕ್ರಮದಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಚಿತ್ರಕತೆ, ಸಾಹಿತ್ಯ ಮತ್ತು ನಿರ್ಮಾಣ ಜವಾಬ್ದಾರಿಯನ್ನು ನಾರಾಯಣ ಪೂಜಾರ ಹೊತ್ತಿದ್ದಾರೆ. ಸಹಾಯಕ ನಿರ್ದೇಶಕರಾಗಿ ಸತೀಶ ಕ್ಯಾತಘಟ್ಟ, ಕಣಿವೆಪ್ಪ, ಬಿ. ಪವನ ಕುಲಕರ್ಣಿ ನಿರ್ವಹಿಸಿದ್ದಾರೆ.
ಛಾಯಾಗ್ರಹಣವನ್ನು ಶರಣು ಸುಗಳಿ, ಲಕ್ಷ್ಮಣ, ಮೈಲಾರಿ, ಗಗನಕುಮಾರ, ಸ್ಥಿರಚಿತ್ರಣ ವಿನ್ಸೆಂಟ್ ಪರೇರಾ, ಸಂಕಲನ ಶರಣು ಸುಗ್ನಳ್ಳಿ, ಅಮೀತ ಬಳ್ಳಾರಿ, ಸಂಗೀತ ಮಹಾರಾಜ್, ಸಾಹಸ: ಕರಾಟೆ ಮಂಜು,ಶಂಕರ ಶಾಸ್ತ್ರೀ ವಿನಾಯಕ ನೃತ್ಯ ಕಲಾ ನಿರ್ದೇಶನ ಶಾಂತಯ್ಯ ಪರಡಿಮಠ,ವಸ್ತ್ರಾಲಂಕಾರ ಹಾಗೂ ಪುಸಾಧನವನ್ನು ಬಿ.ಎಚ್.ನಯನಾ ನಿರ್ವಹಿಸಿದ್ದಾರೆ.
ಪಾತ್ರವರ್ಗದಲ್ಲಿ ನಾರಾಯಣ ಪೂಜಾರ, ಕ್ಷಿತಿ ವೀರಣ್ಯ, ಬೇಬಿ ಸಾಕ್ಷಿ, ಕಾರ್ತಿಕ ಪೂಜಾರ, ಮನಿಷಾ ಕಲ್ಕೂರ, ಬೇಬಿ ಕೃಷ್ಣವೇಣಿ, ಹನುಮಂತ, ಮಾಲತೇಶ ಸುಂಕದ,ಅಬ್ದುಲ್ ಮುನ್ನಾ ಎರೇಸೀಮೆ, ಬಸವರಾಜ ಹೊಂಬಾಳೆ, ಭುವನಾ, ವಿದ್ಯಾ ಬೆಳಗಾಂವ, ವಿಜಯಕುಮಾರ ,ನಾಗರತ್ನ ಮೊದಲಾದ ಕಲಾವಿದರ ತಾರಾಬಳಗವಿದೆ ಎಂದು ನಿರ್ದೇಶಕರು ಮಾಹಿತಿ ನೀಡಿದರು. ಮನಿಷಾ ಕಲ್ಕೂರ, ಭುವನಾ,ಸೈಪೀ, ಚೇತನ, ವಿನೋಧ ಭಾಂಡಗೆ ಮತ್ತು ಚಿತ್ರ ತಂಡದವರು ಇದ್ದರು.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!