Friday, March 5, 2021

Latest Posts

ಬಾಲಿವುಡ್ ಸ್ಟಾರ್ ದಂಪತಿ ಸೈಫ್-ಕರೀನಾ ಮಡಿಲಿಗೆ ಮತ್ತೊಂದು ಮಗು.. ಯಾವ ಮಗು ಗೊತ್ತಾ?

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ಆ ಸಂತಸದ ಕ್ಷಣ ಬಂದೇ ಬಿಟ್ಟಿದೆ.
ಹೌದು, ಕರೀನಾ ಕಪೂರ್ ತಮ್ಮ ಎರಡನೇ ಮಗುವಿಗೆ ಇಂದು ಜನ್ಮ ನೀಡಿದ್ದಾರೆ. ಕರೀನಾ-ಸೈಫ್ ದಂಪತಿಯ ಮುದ್ದಾದ ಮಗು ತೈಮುರ್ ಅಲಿ ಖಾನ್ ಅಣ್ಣನಾಗಿದ್ದಾನೆ.
ಯಾವ ಮಗುವಾದರೂ ಪರವಾಗಿಲ್ಲ, ಮಗು ಆರೋಗ್ಯವಾಗಿದ್ದರೆ ಸಾಕು ಎನ್ನುತ್ತಿದ್ದ ಸೈಫ್ ದಂಪತಿ ಇದೀಗ ಮತ್ತೊಂದು ಗಂಡು ಮಗುವಿನ ಪೋಷಕರಾಗಿದ್ದಾರೆ. ನಿನ್ನೆ ಸಂಜೆ ಮುಂಬೈನ ಬ್ರಿಡ್ಜ್ ಕ್ಯಾಂಡಿ ಆಸ್ಪತ್ರೆಗೆ ಕರೀನಾರನ್ನು ದಾಖಲಿಸಿದ್ದು, ಇಂದು ಕರೀನಾರ ಎರಡನೇ ಮಗುವಿನ ಆಗಮನವಾಗಿದೆ. ಕಳೆದ ಆಗಸ್ಟ್‌ನಲ್ಲಿ ತಮ್ಮ ಕುಟುಂಬಕ್ಕೆ ಸೇರ್ಪಡೆಯಾಗುತ್ತಿರವ ಮತ್ತೊಬ್ಬ ಕ್ಯೂಟ್ ಸದಸ್ಯನ ಬಗ್ಗೆ ಸೈಫ್ ಕರೀನಾ ಹೇಳಿಕೊಂಡಿದ್ದರು. ಕರೀನಾ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದು, ಬಾಲಿವುಡ್ ಮಂದಿ ಶುಭ ಹಾರೈಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss