Wednesday, August 10, 2022

Latest Posts

‘ನಾನು ಕೂಡ 40 ವರ್ಷಕ್ಕೆ ಎರಡನೇ ಬಾರಿ ತಾಯಿಯಾಗಿದ್ದೇನೆ, ಲೇಟಾಗಿ ತಾಯಿಯಾಗೋದು ತಪ್ಪಲ್ಲ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರೀನಾ ಕಪೂರ್ ಖಾನ್ ತನ್ನ ಎರಡನೇ ಮಗ ಜೆಹ್‌ನೊಂದಿಗೆ ಕಾಲಕಳೆಯುತ್ತಾ ಸಿನಿಮಾದಿಂದ ದೂರವೇ ಉಳಿದಿದ್ದಾರೆ.
ಕರೀನಾಗೆ ಇದೀಗ 40 ವರ್ಷ. ಆದರೆ ಫಿಟ್ ಆಗಿರುವ ಕಾರಣ ಅವರ ವಯಸ್ಸನ್ನು ಊಹಿಸೋಕೂ ಆಗೋದಿಲ್ಲ.
ಈಗೆಲ್ಲಾ ಮದುವೆಯಾದ ವರ್ಷಕ್ಕೇ ಮಕ್ಕಳು ಮಾಡಿಕೊಳ್ಳಬೇಕು, ನಿಧಾನ ಆದರೆ ತೊಂದರೆಗಳು ಹೆಚ್ಚು ಎಂದು ಪೋಷಕರು ಹೇಳುತ್ತಾರೆ. ಆದರೆ ಕರೀನಾ ಮಾತ್ರ ಇಷ್ಟೇ ವಯಸ್ಸಿಗೆ ಮಕ್ಕಳು ಮಾಡಿಕೊಳ್ಳಬೇಕು ಎಂದೇನಿಲ್ಲ, ನಿಮಗೆ ಬೇಕು ಎನಿಸಿದಾಗ, ನೀವು ರೆಡಿಯಿದ್ದಾಗ ಮಕ್ಕಳನ್ನು ಮಾಡಿಕೊಳ್ಳಿ ಎಂದಿದ್ದಾರೆ.
ಜೇಹ್ ಹುಟ್ಟಿದಾಗ ನನಗೆ 40 ವರ್ಷ. ತಡವಾಗಿ ಮಕ್ಕಳನ್ನು ಮಾಡಿಕೊಳ್ಳೋದು ತಪ್ಪಲ್ಲ ಎಂದು ಕರೀನಾ ಹೇಳಿದ್ದಾರೆ. ನಾನು ಲೇಟಾಗಿ ಮದುವೆಯಾಗಿದ್ದೇನೆ, ಈಗಲೇ ಮಕ್ಕಳು ಮಾಡಿಕೊಳ್ಳಬೇಕು ಎನ್ನುವ ಅರ್ಜೆನ್ಸಿ ಬೇಡ. ಆರೋಗ್ಯಕರವಾಗಿರಲು ಪ್ರಯತ್ನಿಸಿ ಎಂದು ಕರೀನಾ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss