Saturday, March 25, 2023

Latest Posts

ಕಲ್ಯಾಣ ಕನಾ೯ಟಕಕ್ಕೆ ಖಗೆ೯ ಕೊಡುಗೆ ಶೂನ್ಯ : ಎನ್.ರವಿಕುಮಾರ್

ಹೊಸದಿಗಂತ ವರದಿ ಕಲಬುರಗಿ :

ಕಲ್ಯಾಣ ಕನಾ೯ಟಕಕ್ಕೆ ಬಂದ ಹಣವನ್ನು ಮಲ್ಲಿಕಾರ್ಜುನ ಖರ್ಗೆ, ಪುತ್ರ ಪ್ರಿಯಾಂಕ್ ಖಗೆ೯ ನುಂಗಿ ನೀರು ಕುಡಿದಿದ್ದು,ಕಲ್ಯಾಣ ಕನಾ೯ಟಕದ ಭಾಗಕ್ಕೆ ಖಗೆ೯ ಗಳ ಕೊಡುಗೆ ಶೂನ್ಯವೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಪ್ರಿಯಾಂಕ್ ಖಗೆ೯ ಲಂಗು ಲಗಾಮವಿಲ್ಲದೆ ಮಾತನಾಡುತ್ತಿದ್ದಾರೆ. ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆದ ಶಾಸ್ತಿ,ಕೆಲವೇ ದಿನಗಳಲ್ಲಿ ಪುತ್ರ ಪ್ರಿಯಾಂಕ್ ಖಗೆ೯ಗೆ ಆಗಲಿದೆ. ವಿಧಾನಸಭಾ ಚುನಾವಣೆ ನಂತರ ಮರಿ ಖಗೆ೯ ಬಾಯಿ ಬಂದಾಗಲಿದೆ ಎಂದರು.

ಕಲ್ಯಾಣ ಕನಾ೯ಟಕದ ಭಾಗಕ್ಕೆ ಬಂದಂತಹ ಅನುದಾನವನ್ನು ನುಂಗಿ ನೀರಾಗಿಸಿದ ತಂದೆ-ಮಗ ಹಾಗೂ ಕಾಂಗ್ರೆಸ್ ಪಕ್ಷ, ಈ ಭಾಗದಲ್ಲಿ ಅಭಿವೃದ್ಧಿ ಕಾಯ೯ಗಳಾಗದೇ ಇರುವುದಕ್ಕೆ ಇವರೇ ಮೂಲ ಕಾರಣವೆಂದರು.

ಕ್ರಿಕೆಟ್ ಮ್ಯಾಚ್ ಆಡಲು ಮೈದಾನ ಸಿದ್ದಪಡಿಸಿಕೊಳ್ಳಿ ಎಂಬ ಶಾಸಕ ಖಗೆ೯ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಇನ್ನೂ ಮ್ಯಾಚ್ ಆರಂಭವಾಗಿಲ್ಲ.ಚುನಾವಣೆ ನಿಗಧಿಯಾಗಲಿ ಆಗ ಅವರಿಗೆ ಗೊತ್ತಾಗುತ್ತದೆ ಯಾರು ಬೌಲರ್, ಮತ್ತೆ ಯಾವುದು ಪಿಚ್ ಅಂತ ಎಂದ ಆವರು ಈ ಬಾರಿ ಚಿತಾಪುರ ಕ್ಷೇತ್ರದಲ್ಲಿ 25 ಸಾವಿರ ಮತಗಳ ಅಂತರದಿಂದ ಪ್ರಿಯಾಂಕ್ ಖಗೆ೯ ಅವರನ್ನು ಸೋಲಿಸಲಿದ್ದೇವೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!