spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾರ್ಗಿಲ್ ವಿಜಯ ದಿನದ ಸಂಭ್ರಮ: ನೀವು ತಿಳಿದಿರಬೇಕಾದ ಐದು ಅಂಶಗಳು

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………

ಹೊಸ ದಿಗಂತ ಆನ್ ಡೆಸ್ಕ್:

(ಚಿತ್ರಕೃಪೆ- ಭಾರತೀಯ ಸೇನೆ ಟ್ವಿಟರ್ ಖಾತೆ)

22 ವರ್ಷಗಳ ಹಿಂದೆ ಭಾರತವು ದುರ್ಗಮ ಹಿಮಕಂದರಗಳಲ್ಲಿ ಪಾಕಿಸ್ತಾನಿ ಆಕ್ರಮಣದ ವಿರುದ್ಧ ಸೆಣೆಸಿ ಗೆದ್ದ ಕಾರ್ಗಿಲ್ ವಿಜಯ, ಪ್ರತಿವರ್ಷ ಜುಲೈ 26ರಂದು ಗರ್ವದಿಂದ ನೆನಪು ಮಾಡಿಕೊಳ್ಳಬೇಕಾದ ಸಂಗತಿ. ಇದರ ಹಿನ್ನೆಲೆ ಬಗ್ಗೆ ಹೆಚ್ಚಿನವರು ಅದಾಗಲೇ ಸಾಕಷ್ಟು ತಿಳಿದುಕೊಂಡಿರುತ್ತಾರಾದ್ದರಿಂದ, ಇಲ್ಲಿ ಕೆಲವು ಬಿಂದುಗಳನ್ನು ಮಾತ್ರ ನೆನಪಿಸಿಕೊಳ್ಳುವ ಯತ್ನವಿದೆ. ಈ ಅಂಶಗಳಲ್ಲಿ ಕೆಲವು ನಿಮಗೆ ಆಪ್ತತೆಯೊಂದನ್ನು ಮರುಕಳಿಸಿದರೆ, ಇನ್ನು ಕೆಲವು ಛೇ ಹೀಗೂ ಆಗಿತ್ತಾ ಅಂತಲೂ ಅನ್ನಿಸುವಂತೆ ಮಾಡಿಯಾವು.

  1. ಯೇ ದಿಲ್ ಮಾಂಗೇ ಮೋರ್ ಎಂಬುದು ಪೆಪ್ಸಿ ಕಂಪನಿ ಜಾಹೀರಾತಲ್ಲ, ಬದಲಿಗೆ ಕ್ಯಾಪ್ಟನ್ ವಿಕ್ರಂ ಬಾತ್ರಾ ಘೋಷವಾಕ್ಯ ಎಂಬುದು ನಮಗೆ ಅರಿವಾಗಬೇಕು. ಕಾರ್ಗಿಲ್ ನ ಸೂಕ್ಷ್ಣ ಬೆಟ್ಟ ಪ್ರದೇಶವೊಂದನ್ನು ಮರುವಶಪಡಿಸಿಕೊಂಡ ಹಂತದಲ್ಲಿ ವರದಿಗೆ ತೆರಳಿದ್ದ ಪತ್ರಕರ್ತರು ಈಗ ಹೇಗನಿಸುತ್ತದೆ ಅಂತ ಕೇಳಿದಾಗ, ‘ಈ ಹೃದಯ ಇನ್ನೂ ಹೆಚ್ಚಿನದನ್ನು ಬಯಸುತ್ತಿದೆ’ ಎಂದಿದ್ದರು ಬಾತ್ರಾ. ಅದರಂತೆ ಇನ್ನೊಂದು ಬೆಟ್ಟದ ತುದಿಯನ್ನು ವಶಪಡಿಸಿಕೊಳ್ಳುವ ಯಶಸ್ವಿ ಪ್ರಯತ್ನದಲ್ಲಿ ಅವರು ಅಮರರಾದರು.
  2. ಚಳಿಗಾಲದಲ್ಲಿ ಎರಡೂ ಪಡೆಗಳು ಹಿಂದಕ್ಕೆ ಬರುತ್ತಿದ್ದ ಪ್ರದೇಶದಲ್ಲಿ ಪಾಕಿಸ್ತಾನಿಯರು ಬಂದು ಆಕ್ರಮಿಸಿಕೊಂಡಿದ್ದಾರೆ ಎಂಬ ವರದಿ ಸಿಕ್ಕಿದ್ದು ಸ್ಥಳೀಯ ಕುರಿಗಾಹಿಗಳಿಂದ, ಮೇ 6, 1999ರಂದು. ದೇಶದ ಭದ್ರತೆಯಲ್ಲಿ ಪ್ರತಿ ಭಾರತೀಯನೂ ವಹಿಸಬಹುದಾದ ಪಾತ್ರವನ್ನಿದು ನೆನಪಿಸುತ್ತದೆ.
  3. ಅಧಿಕಾರಿಗಳೂ ಸೇರಿದಂತೆ 527 ಯೋಧರು ತಮ್ಮ ಪ್ರಾಣ ತೆತ್ತು ಕಾರ್ಗಿಲ್ ವಿಜಯವನ್ನು ದಕ್ಕಿಸಿದ್ದಾರೆ. 54 ಅಧಿಕಾರಿಗಳು, 629 ಯೋಧರು ತೀವ್ರವಾಗಿ ಗಾಯಗೊಂಡವರು. ಹಲವರು ಅವರ ಉಳಿದ ಜೀವಮಾನವನ್ನು ಅಂಗಊನತೆಯಲ್ಲಿ ಕಳೆಯಬೇಕಾದವರು.
  4. ಕಾರ್ಗಿಲ್ ಕದನದಲ್ಲಿ ಪಾಕಿಸ್ತಾನದ ಯೋಧರು ಭಾಗವಹಿಸಿರಲಿಲ್ಲ ಎಂದು ಜಗತ್ತಿಗೆ ನಂಬಿಸುವುದಕ್ಕೆ ಪಾಕಿಸ್ತಾನವು ಭಾರತದ ಕಡೆ ಸಮರದಲ್ಲಿ ಹತರಾದ ತಮ್ಮವರ ದೇಹವನ್ನೇ ಪಡೆಯಲಿಲ್ಲ. ಅವರಿಗೆಲ್ಲ ಅವರ ಮತದ ಪ್ರಕಾರವೇ ಗೌರವದ ಅಂತ್ಯಸಂಸ್ಕಾರ ಮಾಡಿದ್ದು ಭಾರತೀಯ ಸೇನೆ.
  5. ಕಾರ್ಗಿಲ್ ವಿಜಯ ವಾಜಪೇಯಿ ಸರ್ಕಾರವಿದ್ದದ್ದು ಎಂಬ ಕಾರಣಕ್ಕೆ 2004-09ರ ಅವಧಿಯ ಯುಪಿಎ ಸರ್ಕಾರ ಕಾರ್ಗಿಲ್ ವಿಜಯ ದಿವಸವನ್ನೇ ಆಚರಿಸಲಿಲ್ಲ. ನಂತರ ಸಂಸದ ರಾಜೀವ ಚಂದ್ರಶೇಖರ್ ಈ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆ ಎತ್ತಿದಾಗ ನಿಲುವು ಬದಲಾಯಿತು. ಅದಕ್ಕೂ ಮೊದಲು ಕಾರ್ಗಿಲ್ ನೆನಪನ್ನು ಮುಸುಕಾಗಿಸುವ ಎಲ್ಲ ಪ್ರಯತ್ನಗಳನ್ನೂ ಕಾಂಗ್ರೆಸ್ ಮಾಡಿತು. ಮಧ್ಯಪ್ರದೇಶದಲ್ಲಿದ್ದ ಕಾಂಗ್ರೆಸ್ ಸರ್ಕಾರ ಕಾಲೇಜು ಪಠ್ಯದಿಂದ ಕಾರ್ಗಿಲ್ ವಿಜಯದ ಪಾಠವನ್ನು ತೆಗೆಸಿಹಾಕಿತ್ತು. ಶವಪೆಟ್ಟಿಗೆ ಹಗರಣ ಎಂಬ ವ್ಯರ್ಥ ಗಲಾಟೆ ಎಬ್ಬಿಸಿ ರಕ್ಷಣಾ ಸಚಿವರ ಮೇಲೆ ಸುಳ್ಳು ಆರೋಪಗಳನ್ನು ಸುರಿಯಿತು, ನಂತರ ಆ ಪ್ರಕರಣ ನ್ಯಾಯಾಲಯದಲ್ಲಿ ಬಿದ್ದುಹೋಯಿತು. 
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss