ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂ ಸರ್ಕಾರವು ಕರೀಮ್‌ಗಂಜ್ ಜಿಲ್ಲೆಯನ್ನು ‘ಶ್ರೀ ಭೂಮಿ’ ಎಂದು ಮರುನಾಮಕರಣ ಮಾಡಿದೆ.
ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಕ್ಯಾಬಿನೆಟ್ ಸಭೆಯ ನಂತರ ನಿರ್ಧಾರವನ್ನು ಪ್ರಕಟಿಸಿದ್ದಾರೆ.
100 ವರ್ಷಗಳ ಹಿಂದೆ ಗುರು ರವೀಂದ್ರನಾಥ ಠಾಗೋರ್ ಅವರು ಅಸ್ಸಾಂನ ಆಧುನಿಕ ಕರೀಂಗಂಜ್ ಜಿಲ್ಲೆಯನ್ನು ‘ಶ್ರೀಭೂಮಿ’- ಮಾ ಲಕ್ಷ್ಮಿಯ ನಾಡು ಎಂದು ಬಣ್ಣಿಸಿದ್ದಾರೆ. ಇಂದು ಅಸ್ಸಾಂ ಕ್ಯಾಬಿನೆಟ್ ನಮ್ಮ ಜನರ ಈ ಬಹುಕಾಲದ ಬೇಡಿಕೆಯನ್ನು ಈಡೇರಿಸಿದೆ ಎಂದು ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.