spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹಿಂದಿ ದಿವಸ್ : ಹಿಂದಿ ಬ್ಯಾಂಕ್ ಮುಂದೆ ಕರ್ನಾಟಕ ಸಂಗ್ರಾಮ ಸೇನೆ ಪ್ರತಿಭಟನೆ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಹುಬ್ಬಳ್ಳಿ:

ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯಾಗಿ ಆಚರಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಖಂಡಿಸಿ ನಗರದ ಕೆಲವು ಹಿಂದಿ ಭಾಷೆ ಬಳಕೆಯ ಬ್ಯಾಂಕ್ ಎದುರಿಗೆ ಕರ್ನಾಟಕ ಸಂಗ್ರಾಮ ಸೇನೆ ಪ್ರತಿಭಟನೆ ಮಾಡಿತು.
ನಂತರ ಅಲ್ಲಿಂದ ಹಿಂದಿ ದಿನಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ದಿಕ್ಕಾರ ಎಂದು ಘೋಷಣೆಯ ಕೂಗುತ್ತಾ ಮೆರವಣಿಗೆ ಮೂಲಕ ಮಿನಿವಿಧಾನ ಸೌದಕ್ಕೆ ತೆರಳಿ ತಹಶೀಲ್ದಾರ ಮೂಲಕ ಪ್ರಧಾನ ಮಂತ್ರಿ ಮೋದಿಯವರಿಗೆ ಈ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದೆ.
ನಂತರ ಕರ್ನಾಟಕ ಸಂಗ್ರಾಮ ಸೇನೆಯ ಸಂಜೀವ ದುಮ್ಮಕ್ಕನಾಳ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಿಂದಿ ಭಾಷೆಯನ್ನು ಅಟ್ಟಕ್ಕೆ ಏರಿಸುತ್ತಿವೆ. ಇದರಿಂದ ಕರ್ನಾಟಕದ ಮಾತೃ ಭಾಷೆ ಕನ್ನಡವನ್ನು ಕಡೆಗಣಿಸುತ್ತಿದೆ ಎಂದು ಹೇಳಿದರು.
ಕರ್ನಾಟಕದ ಕನ್ನಡದವರ ಪಾಲಿಗೆ ಇಂದು ಕರಾಳ ದಿನ ಈಗಾಗಲೇ ನಗರದ ಬಹುತೇಕ ಬ್ಯಾಂಕ್, ಕಚೇರಿ ಮತ್ತು ಪ್ರಮುಖ ಸ್ಥಳಗಳಲ್ಲಿ ಹಿಂದಿ ಭಾಷೆ ಬಳಕೆ ಮಾಡಲಾಗುತ್ತದೆ ಎಂದರು. ಹಿಂದಿ ದಿವಸ ಆಚರಣೆಯನ್ನು ತಕ್ಷಣ ಕೈ ಬೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸರ್ವ ಧರ್ಮ ಸ್ವಯಂ ಸೇವಕ ಸಂಘಟನೆಯ ರಾಜ್ಯಾಧ್ಯಕ್ಷ ಆನಂದ ದಲಬಂಜನ,ಮಂಜುನಾಥ ಬೆಳಗಲಿ, ಕಿರಣ ಇಳಕಲ್, ಪರಶುರಾಮ ದಲಬಂಜನ್, ಕೃಷ್ಣಾ ಮಜ್ಜನವರ ಮತ್ತು ಸುನೀತಾ ಹೊಸಪೇಟೆ ಇದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss