Friday, March 5, 2021

Latest Posts

ಬಿಹಾರ ವಿರುದ್ಧ ಕರ್ನಾಟಕಕ್ಕೆ 267 ರನ್‌ಗಳ ಜಯ: ಪ್ರಸೀದ್ ಕೃಷ್ಣಗೆ 4 ವಿಕೆಟ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ವಿಜಯ ಹಜಾರೆ ಟ್ರೋಫಿಯಲ್ಲಿ ತನ್ನ ಮೊದಲ ಪಂದ್ಯ ಸೋತಿದ್ದ ಕರ್ನಾಟಕವು ಎರಡನೇ ಪಂದ್ಯ ಗೆಲ್ಲಲು ಸಫಲವಾಗಿದೆ. ತನ್ನ ಎರಡನೇ ಪಂದ್ಯದಲ್ಲಿ ಕರ್ನಾಟಕವು ಬಿಹಾರವನ್ನು 267 ರನ್‌ಗಳಿಂದ ಭರ್ಜರಿಯಾಗಿ ಸೋಲಿಸಿದೆ.
ಮೊದಲು ಬ್ಯಾಟ್ ಮಾಡಿದ ಕರ್ನಾಟಕವು ಸಮರ್ಥ್ ಅವರ 158 ರನ್‌ಗಳ ನೆರವಿನಿಂದ 50 ಓವರುಗಳಲ್ಲಿ 3ವಿಕೆಟಿಗೆ 354 ರನ್ ಗಳಿಸಿತು. ದೇವದತ್ತ ಪಡಿಕ್ಕಲ್ 98 ಎಸೆತಗಳಿಂದ 97 ರನ್ ಗಳಿಸಿದರು. ಸಿದ್ಧಾರ್ಥ 76 ರನ್ ಮಾಡಿದರು.
ಇದಕ್ಕುತ್ತರವಾಗಿ ಬಿಹಾರವು 87 ರನ್‌ಗಳಿಗೆ ಆಲೌಟ್ ಆಯಿತು. ಪ್ರಸೀದ್ ಕೃಷ್ಣ 4 ವಿಕೆಟ್ ಗಳಿಸಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss