ಇಂದಿನಿಂದ ಮನೆಯಿಂದ ಮತದಾನಕ್ಕೆ ಅವಕಾಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೇಂದ್ರ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮನೆಯಿಂದಲೇ ಮತದಾನ ಮಾಡುವುದಕ್ಕೆ ಅವಕಾಶ ನೀಡಿದೆ. ಇಂದಿನಿಂದ ಮೇ 6ರ ವರೆಗೆ ವಿಶೇಷ ಚೇತನರು, 80 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ಪತ್ರಕರ್ತರು ಮನೆಯಿಂದಲೇ ಮತದಾನ ಮಾಡಲಿದ್ದಾರೆ.

80,250 ಹಿರಿಯ ನಾಗರಿಕರು ಮತ್ತು 19,279 ಅಗವಿಕಲರು ನೊಂದಾಯಿಸಿಕೊಂಡಿದ್ದಾರೆ. ಅವರೆಲ್ಲರಿಗೂ ಮನೆಯಿಂದಲೇ ಗೋಪ್ಯ ಮತದಾನಕ್ಕೆ ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ.

ಈ ಭಾರಿ ಫಾರ್ಮ್ 12 ಡಿ ಅಡಿ ಅರ್ಜಿ ನೀಡುವ ಮೂಲಕ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗಿದ್ದು, ಇಂದಿನಿಂದ ಮನೆ ಮನೆ ತೆರಳಿ ಬ್ಯಾಲೆಟ್‌ ಪೇಪರ್‌ ನೀಡಿ ಮತದಾನ ಮಾಡಿಸಲಾಗುವುದು. ಈ ವೇಳೆ ಮತ ಯಾರಿಗೆ ಚಲಾಯಿಸುತ್ತಾರೆ ಹೊರತುಪಡಿಸಿ ಉಳಿದ ಎಲ್ಲಾ ಪ್ರಕ್ರಿಯೆಗಳನ್ನು ವಿಡಿಯೋ ಮಾಡಲಾಗುವುದು. ಮತದಾನ ಮಾಡಿಸಲು ಚುನಾವಣಾಧಿಕಾರಿಗಳು ರೂಟ್‌ ಮ್ಯಾಪ್‌ ಹಾಗೂ ನಿಗದಿ ಸಮಯ ಮತ್ತು ದಿನಾಂಕವನ್ನು ನೀಡುವರು. ಆ ಸಮಯದಲ್ಲಿ ನಿರ್ಧಿಷ್ಟ ವಿಳಾಸಗಳಿಗೆ ತೆರಳಿ ಮತದಾನವನ್ನು ಬ್ಯಾಲೆಟ್‌ ಪೇಪರ್‌ನಲ್ಲಿ ಪಡೆಯಲಾಗುವುದು.

ಭಾರತ ಚುನಾವಣಾ ಆಯೋಗವು ಮೇ 10 ರಂದು ರಾಜ್ಯ ವಿಧಾನ ಸಭೆ ಸಾರ್ವತ್ರಿಕ ಚುನಾವಣೆಗೆ ಮತದಾನ ದಿನಾಂಕ ನಿಗದಿಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!