ಮದ್ಯ ಖರೀದಿಸಲು ವಯಸ್ಸನ್ನು ನಿಗದಿಪಡಿಸಿದ ಕರ್ನಾಟಕ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕರ್ನಾಟಕ ಸರ್ಕಾರವು ಮದ್ಯವನ್ನು ಖರೀದಿಸಲು ಕಾನೂನುಬದ್ಧ ವಯಸ್ಸನ್ನು ಕಡಿತಗೊಳಿಸಲು ಯೋಜಿಸಿದೆ.

ಮದ್ಯ ಖರೀದಿ ಮತ್ತು ಮಾರಾಟಕ್ಕೆ ನಿಗದಿಪಡಿಸಿದ್ದ 21 ವರ್ಷಗಳ ವಯೋಮಿತಿಯನ್ನ 18 ವರ್ಷಕ್ಕೆ ಇಳಿಕೆ ಮಾಡುವ ನಿಟ್ಟಿನಲ್ಲಿ’ಕರ್ನಾಟಕ ಅಬಕಾರಿ ಪರವಾನಗಿಗಳ (ಸಾಮಾನ್ಯ ಷರತ್ತು) ನಿಯಮಗಳು-1967’ಕ್ಕೆ ತಿದ್ದುಪಡಿ ತರಲು ಅಬಕಾರಿ ಇಲಾಖೆಯು ಕರಡು ಪ್ರಸ್ತಾವನೆಯನ್ನು ಪ್ರಕಟಿಸಿದೆ.

ಈ ಯೋಜನೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಯುವಜನರು ಧೂಮಪಾನ, ಮದ್ಯಪಾನ ಮತ್ತಿತರ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ವಯಸ್ಸು ಇಳಿಕೆ ಮಾಡಿದಲ್ಲಿ ಹೆಚ್ಚಿನ ಯುವಕರು ಮದ್ಯವ್ಯಸನಿಗಳಾಗುವ ಸಾಧ್ಯತೆ ಇದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!