ಕರ್ನಾಟಕದ ಹಿಜಾಬ್ ವಿವಾದ ಮುಸ್ಲಿಂ ಮಹಿಳೆಯರ ಉನ್ನತಿ ತಡೆಯುವ ಷಡ್ಯಂತ್ರ- ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

ಹೊಸ ದಿಗಂತ ಡಿಜಿಟಲ್ ಡೆಸ್ಕ್

“2019ರಲ್ಲಿ ತ್ರಿವಳಿ ತಲಾಖ್ ಅನ್ನು ಕೊನೆಗೊಳಿಸಿದ ನಂತರ ಇದಕ್ಕೆ ಪ್ರತಿರೋಧವಾಗಿ ಮಹಿಳೆಯ ಮೇಲೆ ಹಿಜಾಬ್ ಹೇರುವ ಯತ್ನ ಆರಂಭಗೊಂಡಿತು. ಕರ್ನಾಟಕದಲ್ಲಿ ಕೆಲವರು ಹುಟ್ಟುಹಾಕಿದ ಹಿಜಾಬ್ ವಿವಾದ ಈ ಷಡ್ಯಂತ್ರದ ಭಾಗ” ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸುದ್ದಿವಾಹಿನಿಯೊಂದರ ಜತೆ ಮಾತನಾಡುತ್ತ ಹೇಳಿದ್ದಾರೆ.

ಹಿಜಾಬ್ ಇಸ್ಲಾಮಿನ ಅತ್ಯಗತ್ಯ ಪದ್ಧತಿ ಏನಲ್ಲ. ಆದಾಗ್ಯೂ ಭಾರತದಲ್ಲಿ ಹಿಜಾಬ್ ಧರಿಸುವ ಸ್ವಾತಂತ್ರ್ಯ ಎಲ್ಲೆಡೆ ಇದೆ. ಆದರೆ, ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರದ ನಿಯಮ ಪಾಲನೆ ಕಡ್ಡಾಯ ಎಂದಿದ್ದಾರೆ ಕೇರಳ ರಾಜ್ಯಪಾಲರು.

ಹಿಜಾಬ್ ಹೇರಿಕೆ ಮೂಲಕ ಮುಸ್ಲಿಂ ಸಮುದಾಯದ ಮಹಿಳೆಯರ ಬೆಳವಣಿಗೆಯನ್ನು ತಡೆಯುವ ಕೆಲಸವಾಗುತ್ತಿದೆ ಎಂಬುದು ಅವರ ಖಚಿತ ನಿಲುವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!