Sunday, June 26, 2022

Latest Posts

ರಾಜ್ಯದಲ್ಲಿನ ಪೊಲೀಸರು ಕೇಸರಿಯಾಗುತ್ತಿದ್ದಾರೆ: ಸಿದ್ದರಾಮಯ್ಯ ಆರೋಪ

ದಿಗಂತ ವರದಿ ವಿಜಯಪುರ:

ರಾಜ್ಯದಲ್ಲಿನ ಪೊಲೀಸರು ಕೇಸರಿಯಾಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು. ಜಿಲೆಯ ಸಿಂದಗಿ ತಾಲೂಕಿನ ಮೋರಟಗಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಒಬ್ಬೊಬ್ಬರು ಬೇಕಾದರೆ ಕೇಸರಿ ವಸ್ತ್ರಗಳನ್ನು ಹಾಕಿಕೊಳ್ಳಲಿ, ಆದರೆ ಇಡೀ ಪೊಲೀಸ್ ಠಾಣೆಯ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಕೇಸರಿಯಾಗುತ್ತಿದ್ದಾರೆ. ಈ ವಿಚಾರವನ್ನು ನಾನು ಟ್ವಿಟ್ ನಲ್ಲಿ ಖಂಡಿಸಿರುವೆ ಎಂದರು.

ಆರ್‌ಎಸ್‌ಎಸ್‌ನವರು, ಪಕ್ಷದವರು ಬೇಕಾದದ್ದು ಮಾಡಿಕೊಳ್ಳಲಿ, ಆದರೆ ಸರ್ಕಾರಿ ಅಧಿಕಾರಿಗಳು, ಸರ್ಕಾರಿ ಇಲಾಖೆಗಳನ್ನೇ ಕೇಸರಿಕರಣ ಮಾಡೋದು ಎಷ್ಟು ಸರಿ ? ಹೀಗಾಗಿ ಕೇಸರಿ ಜೊತೆಗೆ ತ್ರಿಶೂಲವನ್ನೂ ಕೈಯಲ್ಲಿ ಕೊಟ್ಟು ಬಿಡಿ ಅಂದಿದ್ದೆ. ತ್ರಿಶೂಲ ಕೊಡಿ ಅಂತಾ ವ್ಯಂಗ್ಯವಾಗಿ ಹೇಳಿದ್ದೆ ಅಷ್ಟೇ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss