ಹೊಸದಿಗಂತ ವರದಿ, ಕಲಬುರಗಿ:
ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸಾಧನೆ ಮಾಡಿದ ಮಹನೀಯರನ್ನು ಗುರುತಿಸಿ ರಾಜ್ಯ ಸರ್ಕಾರ ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಘೋಷಣೆ ಮಾಡಿ,ಅವರನ್ನು ಸತ್ಕರಿಸುವ ಕೆಲಸ ಮಾಡುತ್ತಿದ್ದು, ಅದರಂತೆ ಕಲಬುರಗಿ ಜಿಲ್ಲೆಯಲ್ಲಿಯೂ ಸಹ ಎರಡು ಕ್ಷೇತ್ರಗಳಾದ ಜಾನಪದ ಹಾಗೂ ಕೃಷಿ -ಪರಿಸರ ಸೇರಿದಂತೆ ಎರಡು ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ.
ಇಬ್ಬರು ಮಹನೀಯರ ಪರಿಚಯ ಇಲ್ಲಿವೆ.
ಜಾನಪದ ಕ್ಷೇತ್ರ.
ಶ್ರೀಮತಿ ಶಕುಂತಲಾ ತಂದೆ ದೇವಲಾನಾಯಕ್,
ತಾಯಿ -ಗಂಗಾಬಾಯಿ.
ಹುಟ್ಟಿದ ವರ್ಷ -೧೯೬೦.
ವಿದ್ಯಾರ್ಹತೆ -೭ನೇ ತರಗತಿ.
ಉದ್ಯೋಗ -ಲಂಬಾಣಿ ಸಮುದಾಯಕ್ಕೆ ಸೇರಿದ ಶಕುಂತಲಾ ಅವರು ಕಳೆದ ೪೫ ವರ್ಷಗಳಿಂದ ಗೀಗಿ ಪದ ಹಾಡುವುದನ್ನೆ ತಮ್ಮ ಉದ್ಯೋಗ ಮಾಡಿಕೊಂಡಿದ್ದು,ನಗರದ ಎಲ್.ಐ.ಜಿ-೩,೧ನೇ ಕ್ರಾಸ್ ಆದರ್ಶ ನಗರದಲ್ಲಿ ವಾಸವಿದ್ದು, ಇವರಿಗೆ ರಾಜ್ಯ ಸರ್ಕಾರ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಎಂದು ಆಯ್ಕೆ ಮಾಡಲಾಗಿದೆ.
ಕೃಷಿ ಮತ್ತು ಪರಿಸರ ಕ್ಷೇತ್ರ
ಸೋಮನಾಥ ರೆಡ್ಡಿ ಜಿ.ಪೂರ್ಮಾ.
ತಂದೆ – ಚಂದ್ರರೆಡ್ಡಿ ಬಿ. ಪೂರ್ಮಾ.
ತಾಯಿ -ಜಗದೇವಮ್ಮಾ ಪೂರ್ಮಾ.
ಹುಟ್ಟಿದ ದಿನ -೧೫ನೇ ಆಗಸ್ಟ್ ೧೯೫೩
ವೃತ್ತಿ -ಕೃಷಿ
ಶಿಕ್ಷಣ -ಎಸ್.ಎಸ್.ಎಲ್.ಸಿ.
ಪತ್ನಿ-ಶ್ರೀಮತಿ ಅನ್ನಪೂರ್ಣ,
ಪುತ್ರಿಯರು -ಸತಿದೇವಿ ಮತ್ತು ಪಾರ್ವತಿ.
ಪುತ್ರರು-ಹನುಮಂತ್ ರೆಡ್ಡಿ ಮತ್ತು ಮಲ್ಲಿಕಾರ್ಜುನ ರೆಡ್ಡಿ.
ಸಾಗುವಳಿ ಮಾಡುತ್ತಿರುವ ಜಮೀನು-೧೮.೦ ಎ.