Wednesday, August 10, 2022

Latest Posts

ವಿಶ್ವದಲ್ಲೇ ಗಮನ ಸೆಳೆದಿದೆ ಕರ್ನಾಟಕದ ಈ ಮೊದಲ ಇಂಟರ್‌ನೆಟ್ ರಹಿತ ‘ಯುವ ಪೇ’!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕರ್ನಾಟಕದ ಪರಿಣತ ಐಟಿ ತಂತ್ರಜ್ಞರು ಅಭಿವೃದ್ಧಿ ಪಡಿಸಿದ ವಿಶ್ವದ ಮೊದಲ ಇಂಟರ್‌ನೆಟ್ ರಹಿತ ಡಿಜಿಟಲ್ ಪೇಮೆಂಟ್ App ಆಗಿರುವ ವಿಶ್ವದ ಮೊದಲ ಇಂಟರ್‌ನೆಟ್ ರಹಿತ-ಸಹಿತವೂ ಆಗಿರುವ ಡಿಜಿಟಲ್ ವ್ಯಾಲೇಟ್‘ಯುವ ಪೇ’ ಇದೀಗ ವಿಶ್ವದ ಗಮನ ಸೆಳೆದಿದೆ.
ರಾಜ್ಯದ ತಜ್ಞ ಐಟಿ ತಂತ್ರಜ್ಞರ ತಂಡ ಮೇಕ್ ಇನ್‌ಇಂಡಿಯಾ, ಡಿಜಿಟಲ್ ಇಂಡಿಯಾ ಹಾಗೂ ಆತ್ಮ ನಿರ್ಭರ್ ಭಾರತ್‌ಯೋಜನೆಯಲ್ಲಿ ಈ ವಿಶೇಷ ಆಪನ್ನು ಅಭಿವೃದ್ಧಿ ಪಡಿಸಲಾಗಿದೆ. ಇದು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಡಿಜಿಟಲ್ ಕ್ರಾಂತಿ ಮಾಡಲಿದೆ. ಈಗಾಗಲೇ ಗ್ರಾಮೀಣ ಭಾಗದಲ್ಲಿ ಕರ್ನಾಟಕ ಸರಕಾರದ ಸಹಯೋಗದೊಂದಿಗೆ ಮಾಡಿರುವ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಇದು ಸುರಕ್ಷಿತ, ಸುಭದ್ರ ಹಾಗೂ ಸುಲಭ ಪಾವತಿಗೆ ವೇದಿಕೆಯಾಗಿದೆ.

Appನ ವೈಶಿಷ್ಟ್ಯವೇನು?
ಈ ಯುವ ಪೇ’ ಅಪ್ಲಿಕೇಶನನ್ನು ಸ್ಮಾರ್ಟ್ ಮತ್ತು ಫೀಚರ್ ಫೋನ್‌ಗಳಲ್ಲಿ ಬಳಸಬಹುದಾಗಿದೆ. ಈ ಅಪ್ಲಿಕೇಶನ್ ಇಂಟರ್‌ನೆಟ್ ರಹಿತ-ಸಹಿತವಾಗಿಯೂ ಕಾರ‍್ಯನಿರ್ವಹಿಸಲಿದೆ. ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಅಭಿವೃದ್ಧಿ ಪಡಿಸಿದ ಮೊದಲ ಇಂಟರ್‌ನೆಟ್ ರಹಿತ ಮೊಬೈಲ್ ಪೇಮೆಂಟ್ App ಎಂಬ ಕೀರ್ತಿಗೆ ಪಾತ್ರವಾಗಿದೆ.

ಕಾಡೂರು ಗ್ರಾಪಂನಲ್ಲಿ ಪ್ರಾಯೋಗಿಕ ಬಳಕೆ
ಭಾರತೀಯ ರಿಸರ್ವ್ ಬ್ಯಾಂಕ್‌ನ ಕಾನೂನಿನ ಚೌಕಟ್ಟಿನೊಳಗೆಯೇ ಅಭಿವೃದ್ಧಿಪಡಿಸಿರುವ ಈ ಅಪ್ಲಿಕೇಶನ್‌ಗೆ ಸರಕಾರವೂ ಮನ್ನಣೆ ನೀಡಿದೆ. ಸರಕಾರದ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕಾಡೂರು ಗ್ರಾಮದ ಪಂಚಾಯತ್ ತೆರಿಗೆ ಸಂಗ್ರಹ ಕುರಿತ ಪ್ರಾಯೋಗಿಕ ಪರೀಕ್ಷೆ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿ ಗಮನ ಸೆಳೆದಿದೆ.
ಮನೆಯಲ್ಲೇ ಕುಳಿತು ತೆರಿಗೆ ಪಾವತಿ ! ಈ ಅಪ್ಲಿಕೇಶನ್‌ನಿಂದ ಜನರು ನೇರವಾಗಿ ಮನೆಯಲ್ಲೇ ಕುಳಿತು ತೆರಿಗೆ ಪಾವತಿ ಮಾಡಬಹುದಾಗಿದೆ. ಇದರಿಂದಾಗಿ ಸರಕಾರಿ ಹಣದ ದುರುಪಯೋಗ ಕಡಿಮೆಯಾಗುವುದರೊಂದಿಗೆ ಸರಕಾರಕ್ಕೆ ತೆರಿಗೆ ಸುಲಭವಾಗಿ ಸಂಗ್ರಹವಾಗುತ್ತದೆ. ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳನ್ನು ‘ಯುವ ಪೇ’ಅಪ್ಲಿಕೇಶನ್‌ಗೆ ಲಿಂಕ್ ಮಾಡಿ ಮೊಬೈಲ್ ಸಂಖ್ಯೆ ಅಥವಾ ಭೀಮ್ ಯುಪಿಐಐಡಿಯ ಮೂಲಕ ನೇರವಾಗಿ ಒಂದು ಬ್ಯಾಂಕ್‌ನಿಂದ ಮತ್ತೊಂದು ಬ್ಯಾಂಕ್‌ಗೆ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ.

ಗ್ರಾಮಮಟ್ಟದಲ್ಲಿ ಯಶಸ್ವಿ ಪ್ರಯೋಗ
ರಾಜ್ಯ ಸರಕಾರದ ಅನುಮೋದನೆಯೊಂದಿಗೆ ಮೊದಲಿಗೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕಾಡೂರು ಗ್ರಾಮದಲ್ಲಿ ಈ ಅಪ್ಲಿಕೇಶನನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಮೂರು ತಿಂಗಳ ಯೋಜನೆಯಲ್ಲಿ ಗ್ರಾಮ ಪಂಚಾಯತ್‌ನ ಎಲ್ಲಾ ಮನೆಗಳಿಗೂ ತೆರಳಿ ಈ ಅಪ್ಲಿಕೇಶನ್ ಮೂಲಕ ತೆರಿಗೆ ಪಾವತಿಸುವಂತೆ ಮನವೊಲಿಸಲಾಯಿತು. ಈ ಗ್ರಾಮದಲ್ಲಿ ಯಶಸ್ವಿಯಾದ ಬಳಿಕ ಉಡುಪಿ ಜಿಲ್ಲೆಯ ಇತರ 15 ಗ್ರಾಮದಲ್ಲ್ಲಿ ಎರಡನೇ ಹಂತದಲ್ಲಿ ಜಾರಿಗೆ ಬಂದಿದ್ದು, ಮುಂದಿನ ತಿಂಗಳಲ್ಲಿ ಉಳಿದ 143 ಗ್ರಾಮ ಪಂಚಾಯಿತಿ ಹಾಗೂ ರಾಜ್ಯದ ಇತರ ಭಾಗಗಳಲ್ಲೂ ಅಳವಡಿಸಲು ಯೋಜನೆ ಸಿದ್ಧಗೊಂಡಿದೆ.ಈ ನಡುವೆ ಒಡಿಶಾ, ಸಿಕ್ಕಿಂ, ಉತ್ತರ ಪ್ರದೇಶ, ಬಿಹಾರ, ಈಶಾನ್ಯ ರಾಜ್ಯಗಳಲ್ಲಿ ಅಪ್ಲಿಕೇಶನನ್ನು ಅಳವಡಿಸಲು ಅಲ್ಲಿನ ಸರಕಾರಗಳೂ ಆಸಕ್ತಿ ತೋರಿಸಿರುವುದು ಇಷ್ಟರಲ್ಲೇ ಇದರ ಮಹತ್ವವನ್ನು ಎತ್ತಿತೋರಿದೆ.

ಇತರೆ ಅಪ್ಲಿಕೇಶನ್‌ಗಳಂತಲ್ಲ
ದೇಶದಲ್ಲಿ ನಗದು ರಹಿತ ಡಿಜಿಟಲ್ ಪಾವತಿಗೆ ಸರಕಾರವೂ ಒತ್ತು ನೀಡುತ್ತಿದೆ. ಹಲವು ಮೊಬೈಲ್ ಪಾವತಿ ಅಪ್ಲಿಕೇಶನ್‌ಗಳು ಮಾರುಕಟ್ಟೆಯಲ್ಲಿವೆ. ಆದರೆ, ಎಲ್ಲಾ ಅಪ್ಲಿಕೇಶನ್‌ಗಳು ಕೆಲಸ ಮಾಡಬೇಕಾದರೆ ಇಂಟರ್‌ನೆಟ್‌ನ ಅವಶ್ಯಕತೆ ಇದೆ. ಉಡುಪಿ ಜಿಲ್ಲೆಯ ಉಡ್ಮಾ ಟೆಕ್ನಾಲಜೀಸ್ ಸಂಸ್ಥೆಯು ವಿಶ್ವದಲ್ಲೇ ಪ್ರಪ್ರಥಮವಾದ ಆಫ್ ಲೈನ್ ವ್ಯಾಲೆಟ್ ಪರಿಚಯಿಸಿದೆ ಎನ್ನುತ್ತಾರೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಬ್ರಹ್ಮಾವರ.

ಆಕರ್ಷಕ ಕ್ಯಾಶ್‌ಬ್ಯಾಕ್

‘ಯುವ ಪೇ’ ಬಳಸಿ ರಿಚಾರ್ಜ್ ಹಾಗೂ ಇನ್ನಿತರ ಬಿಲ್ ಪಾವತಿಗಳನ್ನು ಮಾಡಿದರೆ ಆಕರ್ಷಕ ಕ್ಯಾಶ್ ಬ್ಯಾಕ್ ಇರುತ್ತದೆ. ವರ್ಚುವಲ್ ಪ್ರೀಪೇಯ್ಡ್ ಕಾರ್ಡ್‌ನ್ನು ಅನ್ಲೈನ್ ಪಾವತಿಗಾಗಿ ಬಳಸಿ ಶೇ.3 ಖಚಿತ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ. ಮುಂದಿನ ದಿನದಲ್ಲಿ ಇದೇ ಕಾರ್ಡ್‌ಗಳನ್ನು ಎಟಿಎಂ, ಸ್ವೈಪಿಂಗ್‌ನಲ್ಲಿಯೂ ಉಪಯೋಗಿಸಬಹುದು. ಹಾಗೆಯೇ ಬ್ಯಾಂಕಿಂಗ್ ಸೌಲಭ್ಯಗಳಾದ ಸೇವಿಂಗ್ಸ್, ಆರ್‌ಡಿ, ಎಫ್‌ಡಿ, ಸಾಲ, ಕ್ರೆಡಿಟ್‌ಕಾರ್ಡ್, ವಿಮಾ ಸೌಲಭ್ಯಗಳನ್ನು ಅನುಷ್ಠಾನಕ್ಕೆ ತರಲಿದ್ದು, ಜನರು ಈ ಸೌಲಭ್ಯವನ್ನೂ ಇಂಟರ್‌ನೆಟ್ ರಹಿತವಾಗಿ ಬಳಸಬಹುದಾಗಿದೆ.

ಆಕರ್ಷಕ ಕೊಡುಗೆ

ಅತ್ಯಾಕರ್ಷಕ ಕೊಡುಗೆಗಳು ಹಾಗೂ Quadruple ಆಫರ್‌ಗಳು ‘ಯುವ ಪೇ’ ಅಪ್ಲಿಕೇಶನ್‌ನ ವಿಶೇಷತೆಯಾಗಿದೆ. ವೋಕಲ್ ಫಾರ್ ಲೋಕಲ್‌ಗೆ ಪೂರಕವಾಗಿ ನುರಿತ ಐಟಿ ತಂತ್ರಜ್ಞರು ಅಭಿವೃದ್ಧಿ ಪಡಿಸಿದ ಈ ಅಪ್ಲಿಕೇಶನನ್ನು ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ Yuva Pay ಎಂದು ಟೈಪ್ ಮಾಡಿ ಡೌನ್‌ಲೋಡ್ ಮಾಡಿದ ನಂತರ ನಿಮ್ಮ ಬಿಲ್ ಪಾವತಿಸಿ ಹಾಗೂ ಭರಪೂರ ಖಚಿತ ಕ್ಯಾಶ್‌ಬ್ಯಾಕ್ ಪಡೆಯಲು ಅವಕಾಶವಿದೆ. ಆ ಮೂಲಕ ಮೇಕ್ ಇನ್ ಇಂಡಿಯಾ, ಡಿಜಿಟಲ್‌ಇಂಡಿಯಾ ಹಾಗೂ ಆತ್ಮ ನಿರ್ಭರ್ ಭಾರತ್ ಯೋಜನೆಗೆ ಇನ್ನಷ್ಟು ಶಕ್ತಿ ತುಂಬಬಹುದಾಗಿದೆ.

ಆಪ್ ಬಳಸುವ ವಿಧಾನ

ನೀವು ಮಾರುಕಟ್ಟೆಯಲ್ಲಿ ಶಾಪಿಂಗ್ ವೇಳೆ ‘ಯುವ ಪೇ’ ಬಳಸಿ ಯಾವುದೇ ಭೀಮ್ ಯುಪಿಐ ಕ್ಯೂ ಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಿ ಅಂಗಡಿಗಳಲ್ಲಿ ಬಿಲ್ ಪಾವತಿಸಬಹುದಾಗಿದೆ.ಇದಲ್ಲದೆ ಗ್ರಾಮ ಪಂಚಾಯತ್‌ನ ತೆರಿಗೆ, ಮೊಬೈಲ್ ಬಿಲ್ ಪಾವತಿ, ರಿಚಾರ್ಜ್, ಡಿಟಿಎಚ್, ವಿದ್ಯುತ್, ನೀರು, ವಿಮೆ, ಗ್ಯಾಸ್, ಬ್ರಾಡ್‌ಬ್ಯಾಂಡ್, ಫಾಸ್ಟ್ಯಾಗ್ ರಿಚಾರ್ಜ್, ಲೋನ್ ಇಎಂಐ, ಮುನ್ಸಿಪಲ್ ತೆರಿಗೆ, ಶಾಲಾ ಶುಲ್ಕ, ಕೇಬಲ್ ಟಿವಿ ಬಿಲ್, ಹೌಸಿಂಗ್ ಸೊಸೈಟಿ, ಆಸ್ಪತ್ರೆಹೀಗೆ ಇನ್ನಿತರ ಬಿಲ್‌ಗಳನ್ನೂ ಪಾವತಿ ಮಾಡಬಹುದಾಗಿದೆ.
‘ಯುವ ಪೇ’ ಆಪ್‌ಡೌನ್ ಲೋಡ್ ನಂತರ ನೋಂದಣಿ ಮಾಡಿ ಹಾಗೂ ಏಳು ಯಶಸ್ವಿ ವ್ಯವಹಾರ ನಡೆಸಿದ ತಕ್ಷಣ ಪ್ರತಿಯೊಬ್ಬರಿಗೂ ರೂ.2,500 ಮೌಲ್ಯದ ಹಾಸ್ಪಿಕ್ಯಾಶ್ ವಿಮಾ ಸೌಲಭ್ಯ ಉಚಿತವಾಗಿ ಸಿಗಲಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss