ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕೋವಿಡ್ ಎರಡನೇ ಅಲೆ ಹಾಗೂ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಹಳಷ್ಟು ಜನರಿಗೆ ಅನೇಕ ಸ್ಟಾರ್ಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇದೀಗ ತಮಿಳು ನಟ ಸೂರ್ಯ ಮತ್ತು ಕಾರ್ತಿ ಕೂಡ ಜನರಿಗೆ ನೆರವಾಗಲು ಮುಂದೆ ಬಂದಿದ್ದಾರೆ.
ತಮ್ಮ ಫ್ಯಾನ್ಸ್ ಕ್ಲಬ್ಸ್ನಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಪರದಾಡುತ್ತಿರುವ ಅಭಿಮಾನಿಗಳಿಗೆ ಸೂರ್ಯ ಮತ್ತು ಕಾರ್ತಿ ಧನಸಹಾಯ ಮಾಡಿದ್ದಾರೆ. 250 ಫ್ಯಾನ್ಸ್ ಬ್ಯಾಂಕ್ ಖಾತೆಗೆ ನಟ ಸೂರ್ಯ ತಲಾ 5000 ರೂಪಾಯಿ ವರ್ಗಾವಣೆ ಮಾಡಿದ್ದಾರೆ
ಹಾಗೆಯೇ ನಟ ಕಾರ್ತಿ ಫ್ಯಾನ್ಸ್ ಕ್ಲಬ್ಸ್ನಲ್ಲಿ 150 ಅಭಿಮಾನಿಗಳ ಬ್ಯಾಂಕ್ ಅಕೌಂಟ್ಗೆ ತಲಾ 5000 ರೂಪಾಯಿ ಜಮಾ ಮಾಡಿದ್ದಾರೆ. ಅಭಿಮಾನಿಗಳು ಧನ್ಯವಾದ ತಿಳಿಸಿದ್ದಾರೆ.