Sunday, December 3, 2023

Latest Posts

ಬಾಲಿವುಡ್ ನಲ್ಲಿ ಕರ್ವಾ ಚೌತ್ ಸಂಭ್ರಮ: ಪತಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ ನಟಿಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಾರತದಾದ್ಯಂತ ವಿವಾಹಿತ ಮಹಿಳೆಯರು ಇಂದು ಕರ್ವಾ ಚೌತ್ ಅನ್ನು ಸಂಭ್ರಮದಿಂದ ಆಚರಿಸುತ್ತಾರೆ. ಈ ದಿನದಂದು, ತಮ್ಮ ಗಂಡನ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಸೂರ್ಯೋದಯದಿಂದ ಚಂದ್ರೋದಯದವರೆಗೆ ಒಂದು ದಿನದ ಉಪವಾಸವನ್ನು ಆಚರಿಸುತ್ತಾರೆ.

ಇತ್ತ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಸಹ ಹಬ್ಬ ಕರ್ವಾ ಚೌತ್ ಆಚರಿಸಿಕೊಂಡಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನಟ ಸಿದ್ಧಾರ್ಥ್ ಮಲ್ಹೋತ್ರಾ ಪತ್ನಿ ಕಿಯಾರಾ ಅಡ್ವಾಣಿ ಅವರೊಂದಿಗೆ ತಮ್ಮ ಮೊದಲ ಕರ್ವಾ ಚೌತ್ ಆಚರಣೆಯ ಒಂದು ನೋಟವನ್ನು ಹಂಚಿಕೊಂಡಿದ್ದಾರೆ. ಫೋಟೋಗೆ ಅವರು ಬ್ಲೆಸ್ಡ್‌ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಕತ್ರಿನಾ ಕೈಫ್ ತನ್ನ ಅಭಿಮಾನಿಗಳಿಗೆ ಕರ್ವಚೌತ್ ಶುಭಾಶಯಗಳನ್ನು ಕೋರಿದರು ಮತ್ತು ಅವರ ಆಚರಣೆಯ ಫೋಟೋ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರ ಪತಿ ವಿಕ್ಕಿ ಕೌಶಲ್ ಮತ್ತು ಅವರ ಅತ್ತೆ ಸೇರಿದ್ದಾರೆ.

ರಾಘವ್ ಚಡ್ಡಾ ಅವರನ್ನು ವಿವಾಹವಾದ ಪರಿಣಿತಿ ಚೋಪ್ರಾ ಅವರು ತಮ್ಮ ಮೊದಲ ಕರ್ವಾ ಚೌತ್ ಆಚರಣೆಯನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವುಫೋಟೋಗಳನ್ನು ಹಂಚಿಕೊಂಡಿದ್ದಾರೆ ಮತ್ತು ‘ಮೊದಲ ಕರ್ವಾ ಚೌತ್ ಶುಭಾಶಯಗಳು ನನ್ನ ಪ್ರೀತಿ’ ಎಂದು ಶೀರ್ಷಿಕೆ ನೀಡಿದ್ದಾರೆ.

ಶಿಲ್ಪಾ ಶೆಟ್ಟಿ ತಮ್ಮ ಕರ್ವಾ ಚೌತ್ ಅನ್ನು ಸುನಿತಾ ಕಪೂರ್ ಮನೆಯಲ್ಲಿ ಆಚರಿಸಿದರು. ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಆಚರಣೆಯ ವೀಡಿಯೊವನ್ನು ಹಂಚಿಕೊಂಡ ಶಿಲ್ಪಾ ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಹ್ಯಾಪಿ ಕರ್ವಾ ಚೌತ್ ಲೇಡಿಸ್‌ @kapoor.sunita ಎಲ್ಲಾ ನಿಖರವಾದ ಯೋಜನೆ ಮತ್ತು ಎಲ್ಲಾ ಆಚರಣೆಗಳನ್ನು ತುಂಬಾ ಪ್ರೀತಿಯಿಂದ ಮಾಡಿದ್ದಕ್ಕಾಗಿ. ಧನ್ಯವಾದ’ ಎಂದು ಬರೆದಿದ್ದಾರೆ.

ಅನಿಲ್‌ ಕಪೂರ್‌ ಪತ್ನಿ ಸುನೀತಾ ಕಪೂರ್ ಪ್ರತಿ ವರ್ಷದಂತೆ ಈ ವರ್ಷ ಕೂಡ ತಮ್ಮ ನಿವಾಸದಲ್ಲಿ ಕರ್ವಾ ಚೌತ್ ಆಚರಣೆಯನ್ನು ಆಯೋಜಿಸಿದರು, ಅಲ್ಲಿ ಶಿಲಾ ಶೆಟ್ಟಿ, ರವೀನಾ ಟಂಡನ್ ಮತ್ತು ಮೀರಾ ಕಪೂರ್ ಮುಂತಾದ ಹಲವಾರು ಸೆಲೆಬ್ರಿಟಿಗಳು ಕಾಣಿಸಿಕೊಂಡರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!