ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 333 ಮಂದಿಗೆ ಕೊರೋನಾ ಸೋಂಕು ದೃಢ

ಹೊಸ ದಿಗಂತ ವರದಿ, ಕಾಸರಗೋಡು:

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 333 ಮಂದಿಗೆ ಕೋವಿಡ್ ವೈರಸ್ ದೃಢಗೊಂಡಿದೆ. ಈ ಪೈಕಿ 310 ಜನರಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 166 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ ಕೊರೋನಾ ಆರ್ಭಟ ಮುಂದುವರಿದಿದೆ. ಅದರಂತೆ ರಾಜ್ಯದಲ್ಲಿ 13,835 ಜನರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇದರಲ್ಲಿ 12,499 ಮಂದಿಗೆ ಸಂಪರ್ಕದ ಮೂಲಕ ಸೋಂಕು ತಗಲಿದೆ. ರಾಜ್ಯದಲ್ಲಿ 3654 ಜನರು ಗುಣಮುಖರಾದರು.
ಎರ್ನಾಕುಳಂ ಜಿಲ್ಲೆಯಲ್ಲಿ 2187, ಕಲ್ಲಿಕೋಟೆ 1504, ಮಲಪ್ಪುರಂ 1430, ಕೋಟ್ಟಾಯಂ 1154, ತೃಶೂರು 1149, ಕಣ್ಣೂರು 1132, ತಿರುವನಂತಪುರ 909, ಆಲಪ್ಪುಳ 908, ಪಾಲಕ್ಕಾಡು 864, ಪತ್ತನಂತ್ತಿಟ್ಟ 664, ಇಡುಕ್ಕಿ 645, ವಯನಾಡು 484, ಕೊಲ್ಲಂ 472, ಕಾಸರಗೋಡು ಜಿಲ್ಲೆಯಲ್ಲಿ 333 ಜನರಿಗೆ ಕೋವಿಡ್ ವೈರಸ್ ದೃಢಪಟ್ಟಿದೆ. ಈ ಮಧ್ಯೆ ಕೊರೋನಾ ಸೋಂಕು ಬಾಧಿಸಿ ಕೇರಳದಲ್ಲಿ ಶನಿವಾರ 27 ಮಂದಿ ಮೃತಪಟ್ಟರು. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಒಟ್ಟು 4904 ಜನರು ಸಾವಿಗೀಡಾದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss