Wednesday, July 6, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 449 ಮಂದಿ ಗುಣಮುಖ, 326 ಜನರಿಗೆ ಕೋವಿಡ್ ದೃಢ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಸೋಮವಾರ 326 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಈ ಪೈಕಿ 320 ಜನರಿಗೆ ಸಂಪರ್ಕದ ಮೂಲಕ ವೈರಸ್ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 449 ಮಂದಿ ಸೋಂಕುಮುಕ್ತರಾದರು. ಇದೇ ವೇಳೆ ಕೇರಳದಲ್ಲಿ ಹೊಸದಾಗಿ 7719 ಜನರಿಗೆ ಕೋವಿಡ್ ವೈರಸ್ ದೃಢಗೊಂಡಿದೆ. ಇದರಲ್ಲಿ 7138 ಮಂದಿಗೆ ಸಂಪರ್ಕದಿಂದ ವೈರಸ್ ತಗಲಿದೆ. ರಾಜ್ಯದಲ್ಲಿ 16,743 ಜನರು ಗುಣಮುಖರಾದರು.
ಕೇರಳದ ಜಿಲ್ಲೆಗಳ ಪೈಕಿ ತಿರುವನಂತಪುರ ಜಿಲ್ಲೆಯಲ್ಲಿ 1170, ಎರ್ನಾಕುಳಂ 977, ಕೊಲ್ಲಂ 791, ತೃಶೂರು 770, ಪಾಲಕ್ಕಾಡು 767, ಮಲಪ್ಪುರಂ 581, ಆಲಪ್ಪುಳ 524, ಕಲ್ಲಿಕೋಟೆ 472, ಕೋಟ್ಟಾಯಂ 400, ಕಣ್ಣೂರು 339, ಪತ್ತನಂತ್ತಿಟ್ಟ 327, ಕಾಸರಗೋಡು 326, ಇಡುಕ್ಕಿ 171, ವಯನಾಡು ಜಿಲ್ಲೆಯಲ್ಲಿ 104 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮಧ್ಯೆ ಕೇರಳದಲ್ಲಿ ಕೋವಿಡ್ ವೈರಸ್ ಬಾಧಿಸಿ ಸೋಮವಾರ 161 ಮಂದಿ ಮೃತಪಟ್ಟರು. ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಒಟ್ಟು 11,342 ಜನರು ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss