Wednesday, August 17, 2022

Latest Posts

ಕಾಸರಗೋಡು| 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಇಂದಿನಿಂದ ಕೋವಿಡ್ ವ್ಯಾಕ್ಸಿನೇಷನ್: ಜಿಲ್ಲಾ ವೈದ್ಯಾಧಿಕಾರಿ

ಹೊಸದಿಗಂತ ವರದಿ, ಕಾಸರಗೋಡು:

ಕಾಸರಗೋಡು ಜಿಲ್ಲೆಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ವಯೋಮನದ ಎಲ್ಲರಿಗೂ ಇಂದಿನಿಂದ ಕೋವಿಡ್ ವ್ಯಾಕ್ಸಿನೇಷನ್ ನೀಡಲಾಗುತ್ತಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಆಯ್ದ 10 ಕೇಂದ್ರಗಳಲ್ಲಿ ಈ ಲಸಿಕೆ ನೀಡಿಕೆ ನಡೆಯಲಿದೆ. ಮಂಜೇಶ್ವರ, ಬೇಡಡ್ಕ ಸಾಮಾಜಿಕ ಆರೋಗ್ಯ ಕೇಂದ್ರಗಳು, ಮುಳ್ಳೇರಿಯ, ಚಟ್ಟಂಚಾಲ್, ಚಿತ್ತಾರಿಕಲ್, ಎಣ್ಣಪ್ಪಾರ, ಆನಂದಾಶ್ರಮ, ವೆಳ್ಳರಿಕುಂಡ್, ಕರಿಂದಳಂ ಕುಟುಂಬ ಆರೋಗ್ಯ ಕೇಂದ್ರಗಳು, ತೃಕ್ಕರೀಪುರ ತಾಲೂಕು ಆಸ್ಪತ್ರೆಯಲ್ಲಿ ವ್ಯಾಕ್ಸಿನೇಷನ್ ನೀಡಲಾಗುತ್ತಿದೆ.

ಪ್ರತೀ ಕೇಂದ್ರದಲ್ಲಿ ತಲಾ 200 ಮಂದಿಗೆ ಎಂಬಂತೆ ಪ್ರಥಮ ಹಂತದಲ್ಲಿ 2000 ಮಂದಿಗೆ ಲಸಿಕೆ ನೀಡಿಕೆಗೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ವ್ಯಾಕ್ಸಿನೇಷನ್ ವಿತರಿಸಲಾಗುತ್ತಿದೆ. ಆಶಾ ಕಾರ್ಯಕರ್ತರ ಮುಖಾಂತರ ಮುಂಗಡ ನೋಂದಣಿ ನಡೆಸಿದವರಿಗೆ ಮಾತ್ರ ಲಸಿಕೆ ನೀಡಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!