ಹೊಸ ದಿಗಂತ ವರದಿ, ಕಾಸರಗೋಡು:
ಜಿಲ್ಲೆಯಲ್ಲಿ ಶುಕ್ರವಾರ 330 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 318 ಜನರಿಗೆ ಸಂಪರ್ಕದ ಮೂಲಕ ವೈರಸ್ ತಗಲಿದೆ. ಅಲ್ಲದೆ ಜಿಲ್ಲೆಯಲ್ಲಿ 382 ಮಂದಿ ಸೋಂಕುಮುಕ್ತರಾದರು. ಜಿಲ್ಲೆಯಲ್ಲಿ ಶುಕ್ರವಾರ ಸೋಂಕಿನಿಂದ ಸಾವು ಸಂಭವಿಸಲಿಲ್ಲ. ಇದುವರೆಗೆ ಒಟ್ಟು 503 ಮಂದಿ ಅಸುನೀಗಿದರು. ಇದೇ ವೇಳೆ ಕೇರಳದಲ್ಲಿ ಹೊಸದಾಗಿ 23,260 ಜನರಿಗೆ ಕೊರೋನಾ ಪಾಸಿಟಿವ್ ಆಗಿದೆ. ಇದರಲ್ಲಿ 21,983 ಮಂದಿಗೆ ಸಂಪರ್ಕದಿಂದ ವೈರಸ್ ತಗಲಿದೆ. ರಾಜ್ಯದಲ್ಲಿ 20,388 ಜನರು ಗುಣಮುಖರಾದರು.
ಕೇರಳದ ಜಿಲ್ಲೆಗಳ ಪೈಕಿ ತೃಶೂರು ಜಿಲ್ಲೆಯಲ್ಲಿ 4013, ಎರ್ನಾಕುಳಂ 3143, ಕಲ್ಲಿಕೋಟೆ 2095, ತಿರುವನಂತಪುರ 2045, ಮಲಪ್ಪುರಂ 1818, ಆಲಪ್ಪುಳ 1719, ಪಾಲಕ್ಕಾಡು 1674, ಕೊಲ್ಲಂ 1645, ಕೋಟ್ಟಾಯಂ 1431, ಕಣ್ಣೂರು 1033, ಪತ್ತನಂತ್ತಿಟ್ಟ 983, ಇಡುಕ್ಕಿ 692, ವಯನಾಡು 639, ಕಾಸರಗೋಡು ಜಿಲ್ಲೆಯಲ್ಲಿ 330 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಮಧ್ಯೆ ಕೊರೋನಾ ವೈರಸ್ ಬಾಧಿಸಿ ಕೇರಳದಲ್ಲಿ ಶುಕ್ರವಾರ 131 ಮಂದಿ ಸಾವಿಗೀಡಾದರು. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಒಟ್ಟು 23,296 ಜನರು ಮರಣ ಹೊಂದಿದರು. ಕೇರಳದಲ್ಲಿ ಶುಕ್ರವಾರ ಕೊರೋನಾ ಟೆಸ್ಟ್ ಪಾಸಿಟಿವಿಟಿ ರೇಟ್ (ಟಿಪಿಆರ್) ಶೇಕಡಾ 18.06 ರಷ್ಟು ದಾಖಲಾಗಿದೆ.