Tuesday, August 9, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 474 ಮಂದಿಗೆ ಕೊರೋನಾ ಸೋಂಕು ದೃಢ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಶುಕ್ರವಾರ 474 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 468 ಜನರಿಗೆ ಸಂಪರ್ಕದ ಮೂಲಕ ವೈರಸ್ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 448 ಮಂದಿ ಸೋಂಕುಮುಕ್ತರಾದರು. ಜಿಲ್ಲೆಯಲ್ಲಿ ಕೊರೋನಾ ತಗಲಿ ಶುಕ್ರವಾರ ನಾಲ್ವರು ಮೃತಪಟ್ಟಿದ್ದು , ಈ ಮೂಲಕ ಇದುವರೆಗೆ ಒಟ್ಟು 464 ಜನರು ಬಲಿಯಾದರು. ಇದೇ ವೇಳೆ ಕೇರಳದಲ್ಲಿ ಹೊಸದಾಗಿ 29,322 ಜನರಿಗೆ ಕೊರೋನಾ ವೈರಸ್ ದೃಢಗೊಂಡಿದೆ. ಇದರಲ್ಲಿ 27,874 ಮಂದಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ರಾಜ್ಯದಲ್ಲಿ 22,938 ಜನರು ಗುಣಮುಖರಾದರು.
ಕೇರಳದ ಜಿಲ್ಲೆಗಳ ಪೈಕಿ ತೃಶೂರು ಜಿಲ್ಲೆಯಲ್ಲಿ 3530, ಎರ್ನಾಕುಳಂ 3435, ಕಲ್ಲಿಕೋಟೆ 3344, ಕೊಲ್ಲಂ 2957, ಮಲಪ್ಪುರಂ 2739, ಪಾಲಕ್ಕಾಡು 2545, ಆಲಪ್ಪುಳ 2086, ತಿರುವನಂತಪುರ 1878, ಕೋಟ್ಟಾಯಂ 1805, ಕಣ್ಣೂರು 1490, ಪತ್ತನಂತ್ತಿಟ್ಟ 1078, ವಯನಾಡು 1003, ಇಡುಕ್ಕಿ 961, ಕಾಸರಗೋಡು ಜಿಲ್ಲೆಯಲ್ಲಿ 474 ಜನರಿಗೆ ಕೊರೋನಾ ಪಾಸಿಟಿವ್ ಆಗಿದೆ. ಈ ಮಧ್ಯೆ ಕೇರಳದಲ್ಲಿ ಶುಕ್ರವಾರ ಕೋವಿಡ್ ಸೋಂಕು ಬಾಧಿಸಿ 131 ಮಂದಿ ಸಾವಿಗೀಡಾದರು. ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಒಟ್ಟು 21,280 ಜನರು ಮರಣ ಹೊಂದಿದರು. ಕೇರಳದಲ್ಲಿ ಶುಕ್ರವಾರ ಶೇಕಡಾ 17.91ರಷ್ಟು ಕೊರೋನಾ ಟೆಸ್ಟ್ ಪಾಸಿಟಿವಿಟಿ ರೇಟ್ (ಟಿಪಿಆರ್) ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss