ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಸರಗೋಡು ಜಿಲ್ಲೆಯಲ್ಲಿ ಕೃಷಿಕರ ಸಹಾಯಕ್ಕೆ ಹೆಲ್ಪ್ ಡೆಸ್ಕ್ ಗಳು ಸಿದ್ಧ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….

ಹೊಸ ದಿಗಂತ ವರದಿ, ಕಾಸರಗೋಡು:

ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್ ಡೌನ್ ಹಾಗೂ ಅತಿವೃಷ್ಟಿ ಮುಂತಾದ ಕಾರಣಗಳಿಂದ ಕೃಷಿಕರ ಸಹಾಯಕ್ಕೆ ಕಾಸರಗೋಡು ಜಿಲ್ಲೆಯ ಪಿಲಿಕೋಡು ಉತ್ತರ ವಲಯ ಕೃಷಿ ಸಂಶೋಧನಾ ಕೆಂದ್ರದ ನೇತೃತ್ವದಲ್ಲಿ ಹೆಲ್ಪ್ ಡೆಸ್ಕ್ ಗಳನ್ನು ಸಜ್ಜುಗೊಳಿಸಲಾಗಿದೆ.
ಅಲ್ಲದೆ ಕೃಷಿ ಸಂಬಂಧ ಯಾವುದೇ ಸಂಶಯಗಳ ನಿವಾರಣೆಗೆ, ಬೀಜ, ನೇಜಿ ಸಾಮಗ್ರಿಗಳ ಲಭ್ಯತೆ ಇತ್ಯಾದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಈ ಕೆಳಗೆ ತಿಳಿಸಲಾದ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಬಹುದು.
ವಿಷಯ – ವಿಜ್ಞಾನಿಗಳು – ಮೊಬೈಲ್ ಸಂಖ್ಯೆ ಎಂಬ ಕ್ರಮದಲ್ಲಿ ನೀಡಲಾಗಿದೆ. ತೆಂಗು ಕೃಷಿಯ ವಿಧಾನ ಮತ್ತು ಹವಾಮಾನ – ರತೀಶ್ ಪಿ.ಕೆ. ಸಹಾಯಕ ಪ್ರಾಚಾರ್ಯ: 9447704019, ಗೇರು, ತರಕಾರಿ ಕೃಷಿ ವಿಧಾನ ಮತ್ತು ಹವಾಮಾನ – ಡಾ.ಮೀರಾ ಮಂಜೂಷಾ ಸಹಾಯಕ ಪ್ರಾಚಾರ್ಯೆ: 9895514994, ಭತ್ತದ ಕೃಷಿ ವಿಧಾನ – ಸಿನೀಶ್ ಎಂ.ಎಸ್. ಸಹಾಯಕ ಪ್ರಾಚಾರ್ಯ: 9447923417, ವಿವಿಧ ಬೆಳೆಗಳ ರಕ್ಷಣೆ, ಸಸ್ಯ ಸಂರಕ್ಷಣೆ, ರೋಗಗಳು – ಸಂಜು ಬಾಲನ್ ಸಹಾಯಕ ಪ್ರಾಚಾರ್ಯ: 9400108537, ಕೀಟಗಳು – ಲೀನಾ ಎಂ.ಕೆ. ಸಹಾಯಕ ಪ್ರಾಚಾರ್ಯೆ: 8943225922, ಪಶುಸಂಗೋಪನೆ – ಡಾ.ಅನಿ ಎಸ್. ದಾಸ್ ಅಸೋಸಿಯೇಟ್ ಪ್ರೊಫೆಸರ್: 9447242240, ಬೀಜ, ನೇಜಿ ಸಾಮಗ್ರಿಗಳು: ಅನುಪಮಾ ಎಸ್. ಸಹಾಯಕ ಪ್ರಾಚಾರ್ಯೆ: 9846334758 ಆಗಿದೆ. ಈ ಎಲ್ಲ ಸೇವೆ ಲಾಕ್ ಡೌನ್ ಅವಧಿಯಲ್ಲಿ ಮಾತ್ರ ಇರುವುದು. ಜೊತೆಗೆ ಮೇ 27 ರಂದು ರಾತ್ರಿ 8 ಗಂಟೆಯಿಂದ 9 ಗಂಟೆಯ ವರೆಗೆ ಕೇಂದ್ರದ ಫೇಸ್ ಬುಕ್ ಪುಟದಲ್ಲಿ ವಿಜ್ಞಾನಿಗಳು ಕೃಷಿಕರೊಂದಿಗೆ ನೇರ ಸಂವಾದ ನಡೆಸುವರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss