Tuesday, August 16, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 194 ಜನರಿಗೆ ಕೊರೋನಾ ಸೋಂಕು ದೃಢ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಸೋಮವಾರ 194 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 182 ಜನರಿಗೆ ಸಂಪರ್ಕದ ಮೂಲಕ ವೈರಸ್ ತಗಲಿದೆ. ಅಲ್ಲದೆ ಜಿಲ್ಲೆಯಲ್ಲಿ 452 ಮಂದಿ ಸೋಂಕುಮುಕ್ತರಾದರು. ಜಿಲ್ಲೆಯಲ್ಲಿ ಕೊರೋನಾ ಬಾಧಿಸಿ ಸೋಮವಾರ 4 ಮಂದಿ ಮೃತಪಟ್ಟಿದ್ದು , ಈ ಮೂಲಕ ಇದುವರೆಗೆ ಒಟ್ಟು 493 ಜನರು ಅಸುನೀಗಿದರು. ಇದೇ ವೇಳೆ ಕೇರಳದಲ್ಲಿ ಹೊಸದಾಗಿ 15,058 ಜನರಿಗೆ ಕೋವಿಡ್ ವೈರಸ್ ದೃಢಪಟ್ಟಿದೆ. ಇದರಲ್ಲಿ 14,336 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ರಾಜ್ಯದಲ್ಲಿ 28,439 ಜನರು ಗುಣಮುಖರಾದರು.
ಕೇರಳದ ಜಿಲ್ಲೆಗಳ ಪೈಕಿ ತೃಶೂರು ಜಿಲ್ಲೆಯಲ್ಲಿ 2158, ಕಲ್ಲಿಕೋಟೆ 1800, ಎರ್ನಾಕುಳಂ 1694, ತಿರುವನಂತಪುರ 1387, ಕೊಲ್ಲಂ 1216, ಮಲಪ್ಪುರಂ 1199, ಪಾಲಕ್ಕಾಡು 1124, ಆಲಪ್ಪುಳ 1118, ಕೋಟ್ಟಾಯಂ 1027, ಕಣ್ಣೂರು 814, ಇಡುಕ್ಕಿ 501, ವಯನಾಡು 445, ಪತ್ತನಂತ್ತಿಟ್ಟ 381, ಕಾಸರಗೋಡು ಜಿಲ್ಲೆಯಲ್ಲಿ 194 ಜನರಿಗೆ ಕೊರೋನಾ ವೈರಸ್ ದೃಢಗೊಂಡಿದೆ. ಈ ಮಧ್ಯೆ ಕೋವಿಡ್ ಸೋಂಕು ಬಾಧಿಸಿ ಕೇರಳದಲ್ಲಿ ಸೋಮವಾರ 99 ಮಂದಿ ಸಾವಿಗೀಡಾದರು. ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಒಟ್ಟು 22,650 ಜನರು ಮರಣ ಹೊಂದಿದರು. ಕೇರಳದಲ್ಲಿ ಸೋಮವಾರ ಕೋವಿಡ್ ಟೆಸ್ಟ್ ಪಾಸಿಟಿವಿಟಿ ರೇಟ್ (ಟಿಪಿಆರ್) ಶೇಕಡಾ 16.39 ರಷ್ಟು ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss