ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ಕಾಸರಗೋಡು ಮೆಡಿಕಲ್ ಕಾಲೇಜಿಗೆ 37 ಕೋ.ರೂ.ಯೋಜನೆಗಳ ಅನುಷ್ಠಾನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………….

ಹೊಸ ದಿಗಂತ ವರದಿ, ಕಾಸರಗೋಡು:

ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ 37 ಕೋಟಿ ರೂಪಾಯಿಗಳ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಅನುಮತಿ ಲಭಿಸಿದೆ. ವಸತಿ ಸಂಕೀರ್ಣ (ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್)ಕ್ಕೆ ತಾಂತ್ರಿಕ ಅನುಮತಿ ದೊರಕಿದ್ದು , ಜಲ ವಿತರಣೆ ಯೋಜನೆಯ ಟೆಂಡರ್ ಪೂರ್ಣಗೊಂಡಿದೆ.
ಅಲ್ಲದೆ 6600 ಚದರ ಅಡಿ ವಿಸ್ತೀರ್ಣದ, 9 ಅಂತಸ್ತಿನ ಒಂದು ಹೆಣ್ಣುಮಕ್ಕಳ ಹಾಸ್ಟೆಲ್, 4819 ಚದರ ಅಡಿ ವಿಸ್ತೀರ್ಣದ 9 ಅಂತಸ್ತಿನ ಶಿಕ್ಷಕರ ಕ್ವಾರ್ಟರ್ಸ್ ಸಹಿತ ವಸತಿ ಸಂಕೀರ್ಣ ನಿರ್ಮಾಣಗೊಳ್ಳಲಿದೆ. ಇದಕ್ಕೆ ತಾಂತ್ರಿಕ ಅನುಮತಿ ಲಭಿಸಿರುವ ಹಿನ್ನೆಲೆಯಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಒಳಪಡಿಸಿ 8 ಕೋಟಿ ರೂ.ಗಳ ಆಡಳಿತಾನುಮತಿ ಲಭಿಸಿದೆ. ಕಾಸರಗೋಡು ಮೆಡಿಕಲ್ ಕಾಲೇಜಿನ ಜಲ ವಿತರಣೆ ವ್ಯವಸ್ಥೆಯ ಟೆಂಡರ್ ಪೂರ್ಣಗೊಂಡಿದೆ. ಮೆಡಿಕಲ್ ಕಾಲೇಜು ಕ್ಯಾಂಪಸ್ ಗೆ ಮತ್ತು ಸಮೀಪ ಪ್ರದೇಶಗಳಿಗೆ ಜಲ ವಿತರಣೆ ನಡೆಸುವ ರೀತಿಯ ಯೋಜನೆಯನ್ನು ಅಳವಡಿಸಲಾಗಿದೆ. ಹೆಣ್ಣುಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕಾಗಿ 14 ಕೋಟಿ ರೂ., ಶಿಕ್ಷಕರ ಕ್ವಾರ್ಟರ್ಸ್ ನಿರ್ಮಾಣಕ್ಕೆ 11 ಕೋಟಿ ರೂ. ಮೀಸಲಿರಿಸಲಾಗಿದೆ. ವಸತಿ ಸಂಕೀರ್ಣದ ಹೊರಭಾಗದ ಜಲ ವಿತರಣೆ, ಡ್ರೈನೇಜ್ ಗಳಿಗೆ 64 ಲಕ್ಷ ರೂ., ಹೆಣ್ಣುಮಕ್ಕಳ ಹಾಸ್ಟೆಲ್ ಗೆ ಜಲ ವಿತರಣೆಗೆ ಮತ್ತು ಸ್ಯಾನಿಟೇಷನ್ ಗಳಿಗೆ 68 ಲಕ್ಷ ರೂ., ಶಿಕ್ಷಕರ ಕ್ವಾರ್ಟರ್ಸ್ ನ ಜಲ ವಿತರಣೆ ಮತ್ತು ಸ್ಯಾನಿಟೇಷನ್ ಗಳಿಗೆ 74 ಲಕ್ಷ ರೂ. ಮೀಸಲಿರಿಸಲಾಗಿದೆ. ಮೆಡಿಕಲ್ ಶಿಕ್ಷಣ ನಿರ್ದೇಶಕರು ಯೋಜನೆ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ. ಕಿಟ್ಕೋ ಸಂಸ್ಥೆಯ ಮೂಲಕ ಯೋಜನೆಯು ಜಾರಿಗೊಳ್ಳಲಿದೆ.
ಹೆಣ್ಣುಮಕ್ಕಳ ಹಾಸ್ಟೆಲ್ ನ ಒಂದನೇ ಅಂತಸ್ತಿನಲ್ಲಿ ಅಡುಗೆ ಮನೆ, ಭೋಜನಾಲಯ, ವಿಶ್ರಾಂತಿ ಕೊಠಡಿ, ಸ್ಟೋರ್ ರೂಮ್, ರಿಕ್ರಿಯೇಷನ್ ಹಾಲ್, ಸ್ಟಡಿ ರೂಮ್, ಅತಿಥಿ ಕೊಠಡಿ, ವಾಷ್ ರೂಮ್, ಜಿಂ ಸೌಲಭ್ಯ , ವಿಶಾಲವಾದ ಲ್ಯಾಂಡ್ ಸ್ಕೇಪ್ ಕಾರ್ಟಿಯಾರ್ಡ್ ಇತ್ಯಾದಿ ಅನಿವಾರ್ಯ ಸೌಲಭ್ಯಗಳು ಇರಲಿವೆ. ಎರಡು ಮತ್ತು ಮೂರನೇ ಅಂತಸ್ತಿನಲ್ಲಿ 21.175 ಚದರ ಅಡಿ ವಿಸ್ತೀರ್ಣದಲ್ಲಿ 2 ಮಂಚಗಳಿರುವ ಕೊಠಡಿ ಮತ್ತು ಶೌಚಾಲಯಗಳು, ಬಟ್ಟೆ ಒಗೆಯುವ ಸೌಲಭ್ಯಗಳು ಇರುವುದು.
ಒಂಭತ್ತು ಅಂತಸ್ತಿನ ಶಿಕ್ಷಕರ ಕ್ವಾರ್ಟರ್ಸ್ ನಲ್ಲಿ ಮಲಗುವ ಕೊಠಡಿಗಳು, ಶೌಚಾಲಯಗಳು, ಡೈನಿಂಗ್ ಹಾಲ್, ವಿಶ್ರಾಂತಿ ಕೊಠಡಿ, ಅಡುಗೆ ಮನೆ, ಸ್ಟಾಕ್ ರೂಮ್, ಫಯರ್ ರೂಮ್, ರಿಕ್ರಿಯೇಷನ್ ಹಾಲ್, ಅತಿಥಿಗಳ ಕೊಠಡಿ, ಲಿಫ್ಟ್ ಸೌಲಭ್ಯ ಇತ್ಯಾದಿ ಅನಿವಾರ್ಯ ಸೌಲಭ್ಯಗಳನ್ನು ಏರ್ಪಡಿಸಲಾಗುವುದು.
ಪ್ರಸ್ತುತ ಜಲ ವಿತರಣೆ ಯೋಜನೆಯಿಂದ ಒಂದು ಹೆಚ್ಚುವರಿ ಫೀಡರ್ ಲೈನ್ ಸ್ಥಾಪಿಸಿ ಬದಿಯಡ್ಕದಲ್ಲಿರುವ ಮೆಡಿಕಲ್ ಕಾಲೇಜು ಕ್ಯಾಂಪಸ್ ಮತ್ತು ಸಮೀಪ ಪ್ರದೇಶಗಳಿಗೆ ಜಲ ವಿತರಣೆ ನಡೆಸುವ ರೀತಿಯ ವಾಟರ್ ಸಪ್ಲೈ ಸ್ಕೀಮ್ ನಿರ್ಮಿಸಲಾಗುವುದು. 0.88 ಎಂಎಲ್ ಡಿ ಶುದ್ಧೀಕರಣ ನಡೆಸಿದ ನೀರು ಮೆಡಿಕಲ್ ಕಾಲೇಜಿಗೆ ವಿತರಿಸಲು 3 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ರಿಸರ್ವೋಯರ್ ಬದಿಯಡ್ಕ ಮೆಡಿಕಲ್ ಕಾಲೇಜು ಕ್ಯಾಂಪಸ್ ನಲ್ಲಿ ನಿರ್ಮಿಸಲಾಗುವುದು. 8 ಕೋಟಿ ರೂ. ಮೀಸಲಿರಿಸಿರುವ ಈ ಜಲ ವಿತರಣೆಯು ಶಿರಿಯ ನದಿಯನ್ನು ಆಶ್ರಯಿಸಲಿದೆ.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅವರ ಅಧ್ಯಕ್ಷತೆಯಲ್ಲಿ ಈ ಬಗ್ಗೆ ನಡೆದ ಸಭೆಯಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಯು ಯೋಜನೆಗೆ ಅಂಗೀಕಾರ ನೀಡಿದೆ. ಭವಿತವ್ಯದಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಅಂಗೀಕಾರ ಲಭ್ಯತೆ ನಿಟ್ಟಿನಲ್ಲಿ ಕಟ್ಟಡ ಸೌಲಭ್ಯ ಅನಿವಾರ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸದ್ರಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಿರುವ ಅಕಾಡೆಮಿಕ್ ಕಟ್ಟಡದಲ್ಲಿ ಕೋವಿಡ್ ಆಸ್ಪತ್ರೆ ಚಟುವಟಿಕೆ ನಡೆಸುತ್ತಿದೆ. 82 ಕೋಟಿ ರೂ. ವೆಚ್ಚದಲ್ಲಿ ನಬಾರ್ಡ್ ನ ಆರ್ಥಿಕ ಸಹಾಯದೊಂದಿಗೆ 400 ಹಾಸುಗೆಗಳಿರುವ ಆಸ್ಪತ್ರೆ ಕಟ್ಟಡದ ನಿರ್ಮಾಣ ಚಟುವಟಿಕೆ ತ್ವರಿತಗತಿಯಲ್ಲಿ ಪೂರ್ಣಗೊಳ್ಳುತ್ತಿದೆ. ಜೊತೆಗೆ ಮೆಡಿಕಲ್ ಕಾಲೇಜು ಬಳಿಯ ರಸ್ತೆಯನ್ನು 10 ಕೋಟಿ ರೂ. ವೆಚ್ಚದಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ನಿರ್ಮಿಸಲಾಗಿದೆ. ಮೆಡಿಕಲ್ ಕಾಲೇಜು ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್ ನ ಟೆಂಡರ್ ಕ್ರಮ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ಸಭೆಗೆ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss