Sunday, August 14, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 283 ಮಂದಿಗೆ ಕೊರೋನಾ ದೃಢ, 355 ಗುಣಮುಖ

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಶನಿವಾರ 283 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 273 ಜನರಿಗೆ ಸಂಪರ್ಕದ ಮೂಲಕ ವೈರಸ್ ತಗಲಿದೆ. ಅಲ್ಲದೆ ಜಿಲ್ಲೆಯಲ್ಲಿ 355 ಮಂದಿ ಸೋಂಕುಮುಕ್ತರಾದರು. ಕೊರೋನಾ ಬಾಧಿಸಿ ಜಿಲ್ಲೆಯಲ್ಲಿ ಶನಿವಾರ ಯಾವುದೇ ಸಾವು ಸಂಭವಿಸಿಲ್ಲ. ಅದರಂತೆ ಒಟ್ಟು ಸಾವಿನ ಸಂಖ್ಯೆ 518 ಆಗಿದೆ. ಕೇರಳದಲ್ಲಿ ಹೊಸದಾಗಿ 16,671 ಜನರಿಗೆ ಕೋವಿಡ್ ವೈರಸ್ ದೃಢಪಟ್ಟಿದೆ. ಇದರಲ್ಲಿ 15,794 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ರಾಜ್ಯದಲ್ಲಿ 14,242 ಜನರು ಗುಣಮುಖರಾದರು.
ಕೇರಳದ ಜಿಲ್ಲೆಗಳ ಪೈಕಿ ಎರ್ನಾಕುಳಂ ಜಿಲ್ಲೆಯಲ್ಲಿ 2500, ತಿರುವನಂತಪುರ 1961, ತೃಶೂರು 1801, ಕಲ್ಲಿಕೋಟೆ 1590, ಕೊಲ್ಲಂ 1303, ಮಲಪ್ಪುರಂ 1200, ಕೋಟ್ಟಾಯಂ 1117, ಪಾಲಕ್ಕಾಡು 1081, ಆಲಪ್ಪುಳ 949, ಕಣ್ಣೂರು 890, ಪತ್ತನಂತ್ತಿಟ್ಟ 849, ವಯನಾಡು 661, ಇಡುಕ್ಕಿ 486, ಕಾಸರಗೋಡು ಜಿಲ್ಲೆಯಲ್ಲಿ 283 ಜನರಿಗೆ ಕೊರೋನಾ ಪಾಸಿಟಿವ್ ಆಗಿದೆ. ಈ ಮಧ್ಯೆ ಕೋವಿಡ್ ವೈರಸ್ ಬಾಧಿಸಿ ಕೇರಳದಲ್ಲಿ ಶನಿವಾರ 120 ಮಂದಿ ಅಸುನೀಗಿದರು. ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಒಟ್ಟು 24,248 ಜನರು ಮೃತಪಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss