Thursday, July 7, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ ಸಾವಿರದ ಗಡಿ ದಾಟಿದ ಕೊರೋನಾ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಬುಧವಾರ ಕೋವಿಡ್ ವೈರಸ್ ಸೋಂಕು ಮತ್ತೆ ಸಾವಿರದ ಗಡಿ ದಾಟಿದ್ದು , ಹೊಸದಾಗಿ 1056 ಮಂದಿಗೆ ಪಾಸಿಟಿವ್ ಆಗಿದೆ. ಈ ಪೈಕಿ 1007 ಜನರಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 115 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ ಕೊರೋನಾ ಆರ್ಭಟ ಮುಂದುವರಿದಿದ್ದು , ಹೊಸದಾಗಿ ಬರೋಬ್ಬರಿ 41,953 ಜನರಿಗೆ ವೈರಸ್ ದೃಢಗೊಂಡಿದೆ. ಇದರಲ್ಲಿ 38,896 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ರಾಜ್ಯದಲ್ಲಿ 23,106 ಜನರು ಗುಣಮುಖರಾದರು.
ಕೇರಳದ ಜಿಲ್ಲೆಗಳ ಪೈಕಿ ಎರ್ನಾಕುಳಂ ಜಿಲ್ಲೆಯಲ್ಲಿ 6558, ಕಲ್ಲಿಕೋಟೆ 5180, ಮಲಪ್ಪುರಂ 4166, ತೃಶೂರು 3731, ತಿರುವನಂತಪುರ 3727, ಕೋಟ್ಟಾಯಂ 3432, ಆಲಪ್ಪುಳ 2951, ಕೊಲ್ಲಂ 2946, ಪಾಲಕ್ಕಾಡು 2551, ಕಣ್ಣೂರು 2087, ಇಡುಕ್ಕಿ 1396, ಪತ್ತನಂತ್ತಿಟ್ಟ 1282, ಕಾಸರಗೋಡು 1056, ವಯನಾಡು ಜಿಲ್ಲೆಯಲ್ಲಿ 890 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮಧ್ಯೆ ಕೇರಳದಲ್ಲಿ ಬುಧವಾರ ಕೋವಿಡ್ ವೈರಸ್ ಬಾಧಿಸಿ 58 ಮಂದಿ ಸಾವಿಗೀಡಾದರು. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಮಾಹಾಮಾರಿ ವೈರಸ್ ನಿಂದಾಗಿ ಸತ್ತವರ ಒಟ್ಟು ಸಂಖ್ಯೆ 5565 ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss