Sunday, August 14, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 112 ಮಂದಿಗೆ ಕೊರೋನಾ ಸೋಂಕು ದೃಢ

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಗುರುವಾರ 112 ಮಂದಿಯಲ್ಲಿ ಹೊಸದಾಗಿ ಕೋವಿಡ್ ವೈರಸ್ ಪತ್ತೆಯಾಗಿದೆ. ಈ ಪೈಕಿ 103 ಜನರಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. ಜಿಲ್ಲೆಯಲ್ಲಿ ಇದೇ ದಿನ 170 ಮಂದಿ ಗುಣಮುಖರಾದರು. ಅಲ್ಲದೆ ಕೊರೋನಾ ಸಂಬಂಧ ಜಿಲ್ಲೆಯಲ್ಲಿ ಹೊಸದಾಗಿ ಇಬ್ಬರು ಸಾವಿಗೀಡಾದರು.

ಕೇರಳದಲ್ಲಿ 7545 ಹೊಸ ಪ್ರಕರಣ
ಕೇರಳದಲ್ಲಿ ಗುರುವಾರ ಹೊಸದಾಗಿ 7545 ಜನರಲ್ಲಿ ಕೊರೋನಾ ವೈರಸ್ ದೃಢಗೊಂಡಿದೆ. ಇದರಲ್ಲಿ 7048 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ರಾಜ್ಯದಲ್ಲಿ ಒಂದೇ ದಿನ 5936 ಜನರು ಗುಣಮುಖರಾಗಿದ್ದಾರೆ. ಈ ಮಧ್ಯೆ ಕೇರಳದಲ್ಲಿ 55 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಬುಧವಾರ ಶೇಕಡಾ 10.49 ಟೆಸ್ಟ್ ಪಾಸಿಟಿವಿಟಿ ರೇಟ್ (ಟಿಪಿಆರ್) ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss