Monday, August 8, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 187 ಮಂದಿಗೆ ಗುಣಮುಖ: 121 ಜನರಿಗೆ ಕೋವಿಡ್ ಸೋಂಕು

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಗುರುವಾರ 121 ಮಂದಿಗೆ ಕೊರೋನಾ ಸೋಂಕು ದೃಢಗೊಂಡಿದೆ. ಈ ಪೈಕಿ 106 ಜನರಿಗೆ ಸಂಪರ್ಕದ ಮೂಲಕ ವೈರಸ್ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 187 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 2616 ಜನರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇದರಲ್ಲಿ 2339 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ರಾಜ್ಯದಲ್ಲಿ 4156 ಜನರು ಗುಣಮುಖರಾದರು.
ಕಲ್ಲಿಕೋಟೆ ಜಿಲ್ಲೆಯಲ್ಲಿ 345, ಕೊಲ್ಲಂ 258, ತೃಶೂರು 248, ಎರ್ನಾಕುಳಂ 228, ಕೋಟ್ಟಾಯಂ 224, ಆಲಪ್ಪುಳ 223, ತಿರುವನಂತಪುರ 222, ಕಣ್ಣೂರು 204, ಮಲಪ್ಪುರಂ 171, ಪತ್ತನಂತ್ತಿಟ್ಟ 126, ಕಾಸರಗೋಡು 121, ವಯನಾಡು 89, ಪಾಲಕ್ಕಾಡು 81, ಇಡುಕ್ಕಿ ಜಿಲ್ಲೆಯಲ್ಲಿ 76 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮಧ್ಯೆ ಕೋವಿಡ್ ವೈರಸ್ ಬಾಧಿಸಿ ಕೇರಳದಲ್ಲಿ ಗುರುವಾರ 14 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss