ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………
ಹೊಸ ದಿಗಂತ ವರದಿ, ಕಾಸರಗೋಡು:
ಜಿಲ್ಲೆಯಲ್ಲಿ ಮಂಗಳವಾರ 518 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 510 ಜನರಿಗೆ ಸಂಪರ್ಕದ ಮೂಲಕ ವೈರಸ್ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 621 ಮಂದಿ ಸೋಂಕುಮುಕ್ತರಾದರು. ಜಿಲ್ಲೆಯಲ್ಲಿ ಮಂಗಳವಾರ ನಾಲ್ವರು ಕೋವಿಡ್ ವೈರಸ್ ತಗಲಿ ಸಾವನ್ನಪ್ಪಿದ್ದು , ಇದರಂತೆ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 426 ಮಂದಿ ಸೋಂಕಿನಿಂದಾಗಿ ಮೃತಪಟ್ಟರು. ಇದೇ ವೇಳೆ ಕೇರಳದಲ್ಲಿ ಹೊಸದಾಗಿ 24,296 ಜನರಿಗೆ ಕೊರೋನಾ ಸೋಂಕು ದೃಢಗೊಂಡಿದೆ. ಇದರಲ್ಲಿ 22,775 ಮಂದಿಗೆ ಸಂಪರ್ಕದಿಂದ ವೈರಸ್ ತಗಲಿದೆ. ರಾಜ್ಯದಲ್ಲಿ 19,349 ಜನರು ಗುಣಮುಖರಾದರು.
ಕೇರಳದ ಜಿಲ್ಲೆಗಳ ಪೈಕಿ ಎರ್ನಾಕುಳಂ ಜಿಲ್ಲೆಯಲ್ಲಿ 3149, ತೃಶೂರು 3046, ಕಲ್ಲಿಕೋಟೆ 2875, ಮಲಪ್ಪುರಂ 2778, ಪಾಲಕ್ಕಾಡು 2212, ಕೊಲ್ಲಂ 1762, ಕೋಟ್ಟಾಯಂ 1474, ತಿರುವನಂತಪುರ 1435, ಕಣ್ಣೂರು 1418, ಆಲಪ್ಪುಳ 1107, ಪತ್ತನಂತ್ತಿಟ್ಟ 1031, ವಯನಾಡು 879, ಇಡುಕ್ಕಿ 612, ಕಾಸರಗೋಡು ಜಿಲ್ಲೆಯಲ್ಲಿ 518 ಜನರಿಗೆ ಕೊರೋನಾ ಪಾಸಿಟಿವ್ ಆಗಿದೆ. ಈ ಮಧ್ಯೆ ಕೇರಳದಲ್ಲಿ ಕೋವಿಡ್ ಸೋಂಕು ಬಾಧಿಸಿ ಮಂಗಳವಾರ 173 ಮಂದಿ ಸಾವಿಗೀಡಾದರು. ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಒಟ್ಟು 19,757 ಜನರು ಮರಣ ಹೊಂದಿದರು.