Thursday, August 11, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 312 ಮಂದಿಗೆ ಕೊರೋನಾ ಸೋಂಕು ದೃಢ

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಬುಧವಾರ 312 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 300 ಜನರಿಗೆ ಸಂಪರ್ಕದ ಮೂಲಕ ವೈರಸ್ ತಗಲಿದೆ. ಅಲ್ಲದೆ ಜಿಲ್ಲೆಯಲ್ಲಿ 275 ಮಂದಿ ಸೋಂಕುಮುಕ್ತರಾದರು. ಈ ಮಧ್ಯೆ ಜಿಲ್ಲೆಯಲ್ಲಿ ಕೊರೋನಾ ಬಾಧಿಸಿ ಬುಧವಾರ ಒಂದು ಸಾವು ಸಂಭವಿಸಿದ್ದು , ಅದರಂತೆ ಒಟ್ಟು ಸಾವಿನ ಸಂಖ್ಯೆ 514 ಕ್ಕೇರಿದೆ. ಇದೇ ವೇಳೆ ಕೇರಳದಲ್ಲಿ ಹೊಸದಾಗಿ 19,675 ಜನರಿಗೆ ಕೋವಿಡ್ ವೈರಸ್ ದೃಢಗೊಂಡಿದೆ. ಇದರಲ್ಲಿ 18,924 ಮಂದಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ರಾಜ್ಯದಲ್ಲಿ 19,702 ಜನರು ಗುಣಮುಖರಾದರು.
ಕೇರಳದ ಜಿಲ್ಲೆಗಳ ಪೈಕಿ ಎರ್ನಾಕುಳಂ ಜಿಲ್ಲೆಯಲ್ಲಿ 2792, ತಿರುವನಂತಪುರ 2313, ತೃಶೂರು 2266, ಕಲ್ಲಿಕೋಟೆ 1753, ಕೋಟ್ಟಾಯಂ 1682, ಮಲಪ್ಪುರಂ 1298, ಆಲಪ್ಪುಳ 1256, ಕೊಲ್ಲಂ 1225, ಪಾಲಕ್ಕಾಡು 1135, ಪತ್ತನಂತ್ತಿಟ್ಟ 1011, ಕಣ್ಣೂರು 967, ಇಡುಕ್ಕಿ 927, ವಯನಾಡು 738, ಕಾಸರಗೋಡು ಜಿಲ್ಲೆಯಲ್ಲಿ 312 ಜನರಿಗೆ ಕೊರೋನಾ ಪಾಸಿಟಿವ್ ಆಗಿದೆ. ಕೇರಳದಲ್ಲಿ ಕೋವಿಡ್ ವೈರಸ್ ಬಾಧಿಸಿ ಬುಧವಾರ 142 ಜನರು ಅಸುನೀಗಿದ್ದು , ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಒಟ್ಟು 24,039 ಜನರು ಮರಣ ಹೊಂದಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss