Friday, August 19, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 969 ಮಂದಿಗೆ ಕೊರೋನಾ ಸೋಂಕು ದೃಢ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಬುಧವಾರ 969 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 943 ಜನರಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 475 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ ಕೊರೋನಾ ಆರ್ಭಟ ಮತ್ತೆ ಮುಂದುವರಿದಿದ್ದು , ಹೊಸದಾಗಿ ಬರೋಬ್ಬರಿ 43,529 ಜನರಿಗೆ ವೈರಸ್ ದೃಢಗೊಂಡಿದೆ. ಇದರಲ್ಲಿ 40,133 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ರಾಜ್ಯದಲ್ಲಿ 34,600 ಜನರು ಗುಣಮುಖರಾದರು.
ಕೇರಳದ ಜಿಲ್ಲೆಗಳ ಪೈಕಿ ಎರ್ನಾಕುಳಂ ಜಿಲ್ಲೆಯಲ್ಲಿ 6410, ಮಲಪ್ಪುರಂ 5388, ಕಲ್ಲಿಕೋಟೆ 4418, ತಿರುವನಂತಪುರ 4284, ತೃಶೂರು 3994, ಪಾಲಕ್ಕಾಡು 3520, ಕೊಲ್ಲಂ 3350, ಕೋಟ್ಟಾಯಂ 2904, ಆಲಪ್ಪುಳ 2601, ಕಣ್ಣೂರು 2346, ಪತ್ತನಂತ್ತಿಟ್ಟ 1339, ಇಡುಕ್ಕಿ 1305, ಕಾಸರಗೋಡು 969, ವಯನಾಡು ಜಿಲ್ಲೆಯಲ್ಲಿ 701 ಜನರಿಗೆ ಕೋವಿಡ್ ವೈರಸ್ ದೃಢಪಟ್ಟಿದೆ. ಈ ಮಧ್ಯೆ ಕೊರೋನಾ ಸೋಂಕು ಬಾಧಿಸಿ ಸಾವಿಗೀಡಾಗುವವರ ಸಂಖ್ಯೆಯೂ ಹೆಚ್ಚುತ್ತಿದ್ದು , ಅದರಂತೆ ಕೇರಳದಲ್ಲಿ ಬುಧವಾರ 95 ಮಂದಿ ಮೃತಪಟ್ಟರು. ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಒಟ್ಟು 6053 ಜನರು ಮರಣ ಹೊಂದಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!