Saturday, July 2, 2022

Latest Posts

ಕಾಶಿಯನ್ನು ದಿವ್ಯ-ಭವ್ಯವಾಗಿಸುವ ಮಾರ್ಗ ಸುಲಭದ್ದಾಗಿರಲಿಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಇಂದು ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಉದ್ಘಾಟಿಸುತ್ತಾರೆ. ಈ ಯೋಜನೆಯನ್ನು ಕಾರ್ಯಗತಗೊಳಿಸುವ ಹಿಂದಿನ ಕಥೆಯು ಯೋಜನೆ ರೋಚಕವಾಗಿದೆ.
ಯಾಕೆಂದರೆ ಕಾಶಿಯಲ್ಲಿ ಶ್ರೀವಿಶ್ವನಾಥನ ಸನ್ನಿಧಾನವನ್ನು ಹುಡುಕುವ ಪರಿಸ್ಥಿತಿ ಇತ್ತು. ರಸ್ತೆಗಳು ಗಲ್ಲಿಯಂತಿದ್ದವು. ಕಿಷ್ಕಿಂದೆಯಂತೆ ಇದ್ದ ಈ ಜಾಗದಲ್ಲಿ ಒಂದು ಹಂತದಲ್ಲಿ ಈ ಯೋಜನೆ ಅಸಾಧ್ಯವೆಂದು ಪರಿಗಣಿಸಲಾಗಿತ್ತು. ಆದರೆ, ಎಲ್ಲ ಸವಾಲುಗಳನ್ನು ಮೀರಿ ಕಾಶಿ ಗತವೈಭವವನ್ನು ಪಡೆದಿದೆ.
2018ರ ಮಾರ್ಚ್‌ನಲ್ಲಿ ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಸುಮಾರು ₹800 ಕೋಟಿಗಳ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ್ದರು. ಗಂಗಾ ತಟವನ್ನು ನೇರವಾಗಿ ಕಾಶಿ ವಿಶ್ವನಾಥ ದೇವಾಲಯಕ್ಕೆ ಸಂಪರ್ಕಿಸುವುದು ಯೋಜನೆಯ ಉದ್ದೇಶವಾಗಿತ್ತು. ಅಸ್ತಿತ್ವದಲ್ಲಿರುವ ಪಾರಂಪರಿಕ ರಚನೆಗಳನ್ನು ಸಂರಕ್ಷಿಸುವುದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ದೇವಾಲಯದ ಸಂಕೀರ್ಣದಲ್ಲಿ ಹೊಸ ಸೌಲಭ್ಯಗಳನ್ನು ಒದಗಿಸುವುದು, ದೇವಾಲಯದ ಸುತ್ತಲಿನ ಜನರ ಸಂಚಾರ ಮತ್ತು ವಾಹನ ಸಂಚಾರವನ್ನು ಸುಗಮಗೊಳಿಸುವುದು ಸಂಪರ್ಕಿಸುವುದು ಕೂಡ ಒಳಗೊಂಡಿತ್ತು.
ಗಂಗಾ ಘಾಟ್ ಮತ್ತು ಕಾಶಿ ವಿಶ್ವನಾಥ ದೇವಸ್ಥಾನವನ್ನು ಸಂಪರ್ಕಿಸುವ ಕಾರಿಡಾರ್‌ನ ಹಾದಿಯಲ್ಲಿರುವ ಆಸ್ತಿಗಳನ್ನು ಸ್ವಾಧೀನ ಪಡಿಸುವುದು ಬಹುದೊಡ್ಡ ಮತ್ತು ಪ್ರಮುಖ ಸವಾಲಾಗಿತ್ತು. ನಂಬಿಕೆ ಮತ್ತು ಪಾರದರ್ಶಕ ಹಾಗೂ ಆಕರ್ಷಕ ಪರಿಹಾರ ಪ್ಯಾಕೇಜ್ ನೀಡಿದ್ದರಿಂದ ಜನರು ತಮ್ಮ ಆಸ್ತಿಯನ್ನು ಬಿಟ್ಟುಕೊಟ್ಟಿದ್ದಾರೆ ಎಂದು ಹೇಳುತ್ತಾರೆ ವಾರಣಾಸಿ ಕಮಿಷನರ್ ದೀಪಕ್ ಅಗರ್ವಾಲ್.

40 ಪ್ರಾಚೀನ ದೇವಾಲಯಗಳು ಪತ್ತೆ
ಯೋಜನೆಗಾಗಿ ಸ್ಥಾಪಿಸಲಾದ ಮಂಡಳಿಯಿಂದ ಒಟ್ಟು ೩೧೪ ಮನೆಗಳು/ ನಿವೇಶನಗಳನ್ನು ಖರೀದಿಸಲಾಗಿದೆ. ಇದಕ್ಕಾಗಿ ₹ 390 ಕೋಟಿ ಖರ್ಚು ಮಾಡಲಾಗಿದೆ. ಈ ಆಸ್ತಿಗಳಲ್ಲಿ 37 ಟ್ರಸ್ಟ್‌ಗಳಿಗೆ ಅಥವಾ ದೇವರಿಗೆ ಪಾಲನೆಯ ಹಕ್ಕುಗಳನ್ನು ಹೊಂದಿರುವವರಿಗೆ ಸೇರಿದೆ. ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವಾಗ ಮತ್ತು ಕೆಡವುವ ವೇಳೆ ಕನಿಷ್ಠ 40 ಪ್ರಾಚೀನ ದೇವಾಲಯಗಳನ್ನು ಪತ್ತೆಹಚ್ಚಲಾಗಿದೆ. ಅಲ್ಲಿ ಜನರು ಅತಿಕ್ರಮಣ ಮಾಡಿ, ಅಡುಗೆ ಕೋಣೆ, ಸ್ನಾನಗೃಹಗಳನ್ನು ನಿರ್ಮಿಸಿದ್ದರು. ಶತಮಾನಗಳಷ್ಟು ಹಳೆಯದಾದ ದೇವಾಲಯಗಳು, ಹಿಂದೆ ಮರೆಮಾಡಲ್ಪಟ್ಟವು, ಈಗ ಗೋಚರಿಸುತ್ತವೆ. ಅವುಗಳನ್ನು ಸಂರಕ್ಷಿಸಿ ಸಾರ್ವಜನಿಕರಿಗೆ ತೆರೆಯಲಾಗುತ್ತದೆ.

1400 ಜನರಿಗೆ ಪುನರ್ವಸತಿ
ಮಣಿಕರ್ಣಿಕಾ ಘಾಟ್‌ಗೆ ಸಂಬಂಧಿಸಿದ 37 ಕುಟುಂಬಗಳಿಗೆ ಅವರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರ ಸಣ್ಣ ವಾಸಸ್ಥಳಗಳಿಗೆ ಪ್ರಜ್ಞಾಪೂರ್ವಕವಾಗಿ ಹೆಚ್ಚಿನ ಪರಿಹಾರ ಕೊಡಲಾಗಿದೆ. ಇಡೀ ಪ್ರದೇಶದಲ್ಲಿ ವಾಸಿಸುತ್ತಿದ್ದ ಸುಮಾರು 1400 ಜನರಿಗೆ ಪುನರ್ವಸತಿ ಕಲ್ಪಿಸಲು ₹70 ಕೋಟಿ ಪರಿಹಾರ ನೀಡಲಾಗಿದೆ. ಅತಿಕ್ರಮಣದಾರರನ್ನು ಸಹ ಮಾಲೀಕರಿಗೆ ಸಮಾನವಾಗಿ ಪರಿಗಣಿಸಲಾಗಿದೆ ಎಂದು ವಿವರಿಸುತ್ತಾರೆ ಅಗರ್ವಾಲ್.
ಇದನ್ನು ಹೇಳುವುದು ಸುಲಭವಿತ್ತು, ಮಾಡುವುದು ಹೇಳುವಷ್ಟು ಸುಲಭವಿರಲಿಲ್ಲ. ಪ್ರತಿಯೊಬ್ಬ ಮಾಲೀಕರೊಂದಿಗೆ ಪರಸ್ಪರ ಮಾತುಕತೆ ನಡೆಸಿ, ಈ ಅಸಾಧ್ಯ ಕಾರ್ಯವನ್ನು ಸಾಧಿಸಲಾಗಿದೆ. ಅನೇಕ ಆಸ್ತಿಗಳಿಗೆ ಒಬ್ಬರಿಗಿಂತ ಹೆಚ್ಚು ಮಾಲೀಕರಿದ್ದರು. ಅಲ್ಲದೇ 17 ಆಸ್ತಿಗಳ ಮಾಲೀಕರು ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಅದೊಂದು ಕಠಿಣ ಕಾರ್ಯವಾಗಿತ್ತು. ಅಷ್ಟೇ ಅಲ್ಲ ಹೆಸರಿಗಷ್ಟೇ ಬಾಡಿಗೆಗೆ ಅಲ್ಲಿ ವಾಸಿಸುತ್ತಿದ್ದ ಬಾಡಿಗೆದಾರರ ಮನೆಗಳನ್ನು ಖಾಲಿ ಮಾಡುವುದು ಮತ್ತೊಂದು ದೊಡ್ಡ ಸವಾಲಾಗಿತ್ತು.
ಯಾವುದೇ ವಿವಾದಗಳಿಲ್ಲದೆ, ಯೋಜನೆಯನ್ನು ಪೂರ್ಣಗೊಳಿಸಬೇಕೆಂದು ಕೇಂದ್ರ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರಿಂದ ಸ್ಪಷ್ಟ ನಿರ್ದೇಶನವೂ ಇತ್ತು. ಈ ಯೋಜನೆಯನ್ನು ಅತ್ಯಂತ ಪಾರದರ್ಶಕ ರೀತಿಯಲ್ಲಿ ಮಾಡಬೇಕಾಗಿತ್ತು. ಮೂರು ವರ್ಷಗಳಲ್ಲಿ ಯೋಜನೆಯು ಸಂಪೂರ್ಣವಾಗಿ ದಾವೆ ಮುಕ್ತವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss