ಬೆತ್ತಲೆ ಓಡಾಡುವ ವಿಚಾರಕ್ಕೆ ಜಗಳ: ತಾಯಿ, ನೆರೆಮನೆಯವರನ್ನು ಕೊಂದ ಮಾನಸಿಕ ಅಸ್ವಸ್ಥ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಾನಸಿಕ ಅಸ್ವಸ್ಥ ಎಂದು ಶಂಕಿಸಲಾದ ವ್ಯಕ್ತಿಯೊಬ್ಬ ತನ್ನ ತಾಯಿ ಮತ್ತು ಇಬ್ಬರು ನೆರೆಹೊರೆಯವರನ್ನು ಕೊಂದು ಇತರ ಏಳು ಜನರನ್ನು ಗಾಯಗೊಳಿಸಿದ ಘಟನೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದಿದೆ.
ಜಾವಿದ್ ಅಹ್ಮದ್ ರಾಥರ್ ಎಂಬಾತ ಇಂದು ಬೆಳಗ್ಗೆ ಅಶ್ಮುಕಮ್ ಗ್ರಾಮದಲ್ಲಿ ದೌರ್ಜನ್ಯ ನಡೆಸಿದ್ದಾನೆ. ಈತ ಮೊದಲು ತನ್ನ ತಾಯಿ ಹಫೀಜಾ ಬೇಗಂ ಮೇಲೆ ಬೆತ್ತದಿಂದ ಹಲ್ಲೆ ಮಾಡಿದ್ದಾನೆ. ಆಕೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ವೇಳೆ ನೆರೆಹೊರೆಯವರು ಮಗನ ದಾಳಿಗೆ ಒಳಗಾದ ತಾಯಿಯನ್ನು ರಕ್ಷಿಸಲು ಬಂದಿದ್ದರಿಂದ, ಆ ವ್ಯಕ್ತಿ ನೆರೆಹೊರೆಯವರೆಲ್ಲರನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾನೆ.
ವ್ಯಕ್ತಿಯ ಘೋರ ದಾಳಿಗೆ ಮೊಹಮ್ಮದ್ ಅಮೀನ್ ಶಾ ಮತ್ತು ಗುಲಾಂ ನಬಿ ಎಂಬ ಇಬ್ಬರು ವ್ಯಕ್ತಿಗಳು ಸಹ ಸಾವನ್ನಪ್ಪಿದ್ದಾರೆ. ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಜಾವಿದ್ ಬೆತ್ತಲೆಯಾಗಿ ಹೊರಗೆ ಹೋಗುತ್ತಿದ್ದ. ಆದರೆ ತಾಯಿ ಹಫೀಜಾ ಬೇಗಂ ಆತ ಮನೆಯಿಂದ ಹೊರಗೆ ಹೋಗದಂತೆ ತಡೆಯಲು ಯತ್ನಿಸಿದ್ದರು.
“ಇದು ಅವನನ್ನು ಕೆರಳಿಸಿದಂತೆ ತೋರುತ್ತಿದೆ. ಅವನು ಮೊದಲು ತನ್ನ ತಾಯಿಯನ್ನು ಗುರಿಯಾಗಿಸಿಕೊಂಡನು ಮತ್ತು ನಂತರ ತನ್ನ ದಾರಿಯಲ್ಲಿ ಬಂದ ಪ್ರತಿಯೊಬ್ಬರ ಮೇಲೆ ದಾಳಿ ಮಾಡಿದನು” ಎಂದು ನೆರೆಯ ಮತ್ತು ಸ್ಥಳೀಯ ರಾಜಕೀಯ ಮುಖಂಡ ಅಲ್ತಾಫ್ ಅಹ್ಮದ್ ಕಾಲೂ ಹೇಳಿದರು.
ಒಂದು ದಿನದ ಹಿಂದೆ ಜಾವಿದ್ ಮಾರುಕಟ್ಟೆಯಲ್ಲಿ ಬೆತ್ತಲೆಯಾಗಿ ತಿರುಗಾಡುತ್ತಿದ್ದಾಗ ಪಹಲ್ಗಾಮ್‌ನಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!